ಭಾರತ-ಪಾಕ್ ಹಳೆಯದನ್ನು ಮರೆಯಲಿ: ಕಸೂರಿ
ಇಸ್ಲಾಮಾಬಾದ್:
ಉಭಯ ರಾಷ್ಟ್ರಗಳು ಸಿಯಾಚಿನ್ ಮತ್ತು ಕಾರ್ಗಿಲ್‌ನ್ನು `ಮರೆಯಲೇಬೇಕು' ಎಂದು
ಪಾಕಿಸ್ತಾನದ ವಿದೇಶ ಸಚಿವರಾದ ಖುರ್ಷಿದ್ ಮೆಹಮೂದ್ ಕಸೂರಿ ಬುಧವಾರ ಹೇಳಿದ್ದಾರೆ.
ಭಾರತ ಕಾರ್ಗಿಲ್ ಬಗ್ಗೆ
ಮಾತಾಡಿದರೆ ಪಾಕಿಸ್ತಾನ ಸಿಯಾಚಿನ್ ಕುರಿತು ಮಾತನಾಡುತ್ತದೆ. ಇದು ಮುಗಿಯುವುದೇ
ಇಲ್ಲ. ಹಾಗಾಗಿ ನಾವು ಮತ್ತೆ ಇತಿಹಾಸದತ್ತ ಹೋಗುವ ಪ್ರಯತ್ನ ಮಾಡುವುದು ಬೇಡ.
ಸ್ನೇಹ ವರ್ಧಿಸುವ ಆಶಯ ನಮ್ಮಲ್ಲಿದ್ದದ್ದೇ ಆದರೆ ಸಿಯಾಚಿನ್ ಮತ್ತು ಕಾರ್ಗಿಲ್‌ನ್ನು
ನಾವು ಮರೆಯಲೇ ಬೇಕು' ಎಂದು ವಿವರಿಸಿದ್ದಾರೆ.