Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಕೇಂದ್ರದ ವಿರುದ್ಧ ಬ್ಲಾಗಿಗಳ ಆಕ್ರೋಶ

ಬೆಂಗಳೂರು : ಮುಂಬೈ ಸರಣಿ ಬಾಂಬ್ ಸ್ಫೋಟದ ನಂತರ ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಹಾಗೂ ಇತ್ತೀಚಿನ ದಿನಗಳಲ್ಲಿ ನಕ್ಸಲ್‌ವಾದಕ್ಕೆ ಸಿಗುತ್ತಿರುವ ಬೆಂಬಲ ಕುರಿತಂತೆ ಕಳವಳಗೊಂಡಿದ್ದ ಕೇಂದ್ರ ಸರ್ಕಾರ, ಬ್ಲಾಗ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರುವ ಉದ್ದೇಶದಿಂದ ಸರ್ಕಾರಿ ಆಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲೇ ವಿಶ್ವದಾದ್ಯಂತ ಬ್ಲಾಗ್‌ಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಹಾಗೂ ಬ್ಲಾಗ್ ಸೇವೆಯನ್ನು ನಿರಾತಂಕವಾಗಿ ಮುಂದುವರೆಸಲು ತಮ್ಮ-ತಮ್ಮದೇ ಆದ ರೀತಿಯಲ್ಲಿ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.

 

ಈ ಬಗ್ಗೆ ಕೂಲಂಕುಶವಾದ ಮಾಹಿತಿಯನ್ನೊದಗಿಸುವ ವೆಬ್‌ಸೈಟ್‌ಗಳ ಮಹಾಪೂರವನ್ನೇ ವೆಬ್‌ಸೈಟ್ ಒಂದರಲ್ಲಿ ಒದಗಿಸಲಾಗಿದೆ. ಈ ಅಂತರ್‌ಜಾಲದಲ್ಲಿ ನಿರ್ಬಂಧಗಳನ್ನು ಹೇರಿದ ವೆಬ್‌ಸೈಟ್‌ಗಳನ್ನು ಹೇಗೆ ಯಾರಿಗೂ ತಿಳಿಯದಂತೆ ಉಪಯೋಗಿಸಬಹುದೆನ್ನುವುದರ ಬಗ್ಗೆ ಸಾಕಷ್ಟು ಮಾಹಿತಿ ಒದಗಿಸುತ್ತದೆ ಎಂದು ಕನ್ನಡ ಪತ್ರಿಕೆಯೊಂದು ವರದಿ ಮಾಡಿದೆ.

 

ವೆಬ್‌ಸೈಟ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರುವ ಕೇಂದ್ರ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿರುವ ಬ್ಲಾಗಿಗಳು, ಇಂತಹ ನಿಷೇಧಗಳನ್ನು ಹೇರುವುದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಿರುವ ರಾಷ್ಟ್ರಗಳಾದ ಚೀನಾ, ಇರಾನ್ ಹಾಗೂ ಕ್ಯೂಬಾ ದೇಶಗಳು. ಅಂತ ರೀತಿಯಲ್ಲಿ ನಮ್ಮ ಸರ್ಕಾರ ಏಕೆ ವರ್ತಿಸುತ್ತಿದೆ ಎಂದು ಬ್ಲಾಗಿಗಳು ಕಟಕಿಯಾಡಿದ್ದಾರೆ.

 

ಸರ್ಕಾರ ನಿಷೇಧ ಹೇರುವುದಾದರೆ ಹೇರಲಿ, ಆದರೆ ನಾವು ಮಾತ್ರ ನಮ್ಮ ಅಭಿಪ್ರಾಯವನ್ನು ತಿಳಿಸದೇ ಬಿಡುವುದಿಲ್ಲ ಎಂದು ಬ್ಲಾಗಿಗಳು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 

ಕೆಲವು ಬ್ಲಾಗಿಗಳಂತೂ ಪ್ರಾಕ್ಸಿವೆಬ್ ತಾಣಗಳಿಂದ ತಮಗೆ ಬೇಕಾಗಿರುವ ಮಾಹಿತಿಯನ್ನು ಯಾವ ರೀತಿಯಲ್ಲಿ ರವಾನಿಸಬೇಕು ಹಾಗೂ ಯಾವ ರೀತಿಯಲ್ಲಿ ಪಡೆಯಬೇಕೆನ್ನುವುದರ ಬಗ್ಗೆ ಸಾಕಷ್ಟು ಮಾಹಿತಿಯನ್ನೊದಗಿಸಿದ್ದಾರೆ.

 

ಅವರ ಪ್ರಕಾರ ಸರ್ಕಾರ ಭಯೋತ್ಪಾದಕ ಚಟುವಟಿಕೆ ಹತ್ತಿಕ್ಕುವ ಕೆಲಸವನ್ನೇ ಮುಂದಿಟ್ಟುಕೊಂಡು ನಮ್ಮ ಸ್ವಾತಂತ್ರ್ಯಹರಣ ಮಾಡುವುದು ಸಾಧ್ಯವಿಲ್ಲ. ಅದರ ಬದಲಿಗೆ ಸರ್ಕಾರಗಳು ಅಂತಹ ಮಾಹಿತಿ ನೀಡುತ್ತಿರುವವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com