Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ದೆಹಲಿಯ ಏಮ್ಸ್‌ಗೆ ಹುಸಿ ಬಾಂಬ್ ಕರೆ

ನವದೆಹಲಿ: ಬಾಂಬ್ ಇಡಲಾಗಿದೆ ಎಂಬ ಕರೆಯಿಂದ ದಿಲ್ಲಿಯ ಏಮ್ಸ್ (All India Institute of Medical Science) ನಲ್ಲಿ ನಿನ್ನೆ ಕೆಲಹೊತ್ತು ಆತಂಕದ ಛಾಯೆ ಆವರಿಸಿತ್ತು. ಬಳಿಕ ಬಾಂಬ್ ನಿಷ್ಕ್ರಿಯದಳದವರು ಸ್ಥಳಕ್ಕೆ ಆಗಮಿಸಿ, ಅಲ್ಲಿ ಬಾಂಬ್ ಇಲ್ಲದಿರುವುದನ್ನು ಖಚಿತ ಪಡಿಸಿದ ಬಳಿಕ ಜನರು ನಿರಾಳರಾದರು.

 

ಅನಾಮಧೇಯ ವ್ಯಕ್ತಿಯೊಬ್ಬ ಏಮ್ಸ್ ಕ್ಯಾಂಪಸ್‌ನಲ್ಲಿ ಬಾಂಬ್ ಇಡಲಾಗಿದೆ ಎಂದು ಫೋನ್ ಕರೆಮಾಡಿ ಹೇಳಿದ. ಇದನ್ನು ಗಂಭೀರವಾಗಿ ಪರಿಗಣಿಸಿದ ಬಾಂಬ್ ನಿಷ್ಕ್ರಿಯದಳ ಸತತ ಮೂರು ತಾಸುಗಳ ಹುಡುಕಾಟ ನಡೆಸಿ ಅದು ಹುಸಿ ಬಾಂಬ್ ಕರೆ ಎಂದು ದೃಢಪಡಿಸಿಕೊಂಡಿತು. ಎಲ್ಲಿಂದ ಕರೆಮಾಡಲಾಗಿದೆ ಮತ್ತು ಕರೆಮಾಡಿದಾತ ಯಾರು ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com