ಸಿದ್ದರಾಮಯ್ಯ
ರಾಜೀನಾಮೆ ಅಧ್ಯಾಯ ಸಂಪೂರ್ಣಂ
೨೯ರಂದು ಸೋನಿಯಾ
ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು: ಮಾಜಿ
ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಮ್ಮ ರಾಜೀನಾಮೆ ಪತ್ರವನ್ನು
ಸ್ಪೀಕರ್ ಕೃಷ್ಣ ಅವರಿಗೆ ಸಲ್ಲಿಸಿದರು.
ಶುಕ್ರವಾರವೇ ರಾಜೀನಾಮೆ
ಸಲ್ಲಿಸಲು ನಿರ್ಧರಿಸಿದ್ದ ಸಿದ್ದರಾಮಯ್ಯ ಅವರಿಗೆ ಸದನದಲ್ಲಿ ರಾಜೀನಾಮೆ ಹೇಳಿಕೆಯನ್ನು
ನೀಡಲು ಅವಕಾಶ ದೊರೆತಿರಲಿಲ್ಲ. ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ
ಆರಿಸಿ ಬಂದಿದ್ದ ಸಿದ್ದರಾಮಯ್ಯ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ
ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಕಾಂಗ್ರೆಸ್ ನಾಯಕಿ ಸೋನಿಯಾ
ಗಾಂಧಿ ಸಮ್ಮುಖದಲ್ಲಿ ಜುಲೈ ೨೯ರಂದು ದೆಹಲಿಯಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.