ಯಕ್ಷಗಾನ ಕಲಾವಿದ ಶೇಣಿ ಭಟ್ಟರು ಇನ್ನಿಲ್ಲ
ಕಾಸರಗೋಡು:
ಯಕ್ಷಗಾನದ ಅಭಿಜಾತ ಕಲಾವಿದ, ಮಾತಿನ ಲೋಕದ ಮಹಾಕವಿ, ಪೌರಾಣಿಕ
ಪಾತ್ರಗಳಿಗೆ ಜೀವ ತುಂಬಿದ ಶೇಣಿ ಗೋಪಾಲ ಕೃಷ್ಣ ಭಟ್ಟರು ಮಂಗಳವಾರ ಮಧ್ಯಾಹ್ನ
ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು ಬಪ್ಪ ಬ್ಯಾರಿ, ಚಂದಗೋಪ, ಮಾಧವ ಭಟ್ಟ, ತುಘಲಕ್ ಮುಂತಾದ
ಪಾತ್ರಗಳ ಮೂಲಕ ವೈವಿಧ್ಯತೆ ಮೆರೆದಿದ್ದರು.