Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಜಾವಾ ಸುನಾಮಿಗೆ ತುತ್ತಾದವರ ಸಂಖ್ಯೆ ೫೦೦

ಇಂಡೋನೇಷ್ಯಾ : ಇಂಡೋನೇಷ್ಯಾದಲ್ಲಿ ಸಂಭವಿಸಿದ ಸುನಾಮಿಗೆ ಬಲಿಯಾದವರ ಸಂಖ್ಯೆ ೪೫೦ ದಾಟಿದೆ.  ನಾಪತ್ತೆಯಾಗಿರುವ ನೂರಾರು ಮಂದಿ ಮೃತಪಟ್ಟಿರಬಹುದೇ ಎಂಬ ಭೀತಿ ಈಗ ಎದುರಾಗಿದೆ.  ಜಾವಾ ದ್ವೀಪದ ೧೮೦ ಕಿ.ಮೀ ಉದ್ದದ ಸಮುದ್ರ ಪ್ರದೇಶಕ್ಕೆ ಅಪ್ಪಳಿಸಿರುವ ರಕ್ಕಸ ಅಲೆಯ ಹೊಡೆತಕ್ಕೆ ಸಾವಿರಾರು ಮಂದಿ ಆಸ್ತಿಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

 

ಅಲ್ಲಲ್ಲಿ ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳ ಅಡಿಯಿಂದ ಮೃತಪಟ್ಟವರನ್ನು ಹೊರತೆಗೆಯುವ ಕಾರ್ಯ ಪ್ರವಾಹದೋಪಾದಿಯಲ್ಲಿ ಸಾಗಿದ್ದು, ಬಂಧುಗಳನ್ನು-ಸ್ನೇಹಿತರನ್ನು ಕಳೆದುಕೊಂಡವರ ಅಳಲು ಮುಗಿಲು ಮುಟ್ಟಿದೆ.  ಈತನಕ ಜಾವಾದ ತಾಸಿಕ್‌ಮಲಾಯದಲ್ಲಿ ೪೪ ಮಂದಿ, ಪೆಂಗಾನ್‌ಡೆರೆನ್‌ನಲ್ಲಿ ೧೭೨ ಮಂದಿ ಹಾಗೂ ಸಿಲಾಕ್ಯಾಪ್ ಪ್ರದೇಶದಲ್ಲಿ ೮೦ ಮಂದಿಯ ಶವ ಪತ್ತೆಯಾಗಿದೆ.

 

ಈ ಮಧ್ಯೆ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ವಾಸಿಸುತ್ತಿರುವ ಜನರು ಆತಂಕದಲ್ಲಿದ್ದಾರೆ.  ಸುನಾಮಿ ನಂತರ ಅವರು ಮೀನುಗಾರಿಕೆಗೆ ಸಮುದ್ರಕ್ಕಿಳಿಯದೇ ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ.

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com