Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಬೆಂಗಳೂರಿಗೆ ಹೈಟೆಕ್ ಸೈಬರ್ ಕ್ರೈಂ ಲ್ಯಾಬ್

ಪೊಲೀಸರಿಗೆ ಸೈಬರ್ ಕುರಿತ ಶಿಕ್ಷಣ

 

ಬೆಂಗಳೂರು: ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ರಾಷ್ಟ್ರೀಯ ಸಾಫ್ಟ್‌ವೇರ್ ಸೇವೆಗಳ ಕಂಪೆನಿಯು ಬೆಂಗಳೂರಿನಲ್ಲಿ ಅತ್ಯುನ್ನತ ಮಾದರಿಯ ಅಂತರ್ಜಾಲ ಅಪರಾಧ ಪ್ರಯೋಗಾಲಯ(ಸೈಬರ್ ಕ್ರೈಂ ಲ್ಯಾಬ್)ವನ್ನು ಸ್ಥಾಪಿಸಲಿದೆ.

 

ಪ್ರಯೋಗಾಲಯವನ್ನು ಸಿಓಡಿ ಕಾರ್ಯಾಲಯದ ಆವರಣದಲ್ಲಿ ಸ್ಥಾಪಿಸಲಾಗುವುದು. ಪೋಲಿಸರಿಗೆ ಅಂತರ್ಜಾಲದ ಅಪರಾಧಗಳು , ಮಾಹಿತಿ ಸಂರಕ್ಷಣೆ, ಅಂತರ್ಜಾಲ ಸಂರಕ್ಷಣೆ ಕಾನೂನಿನ ಬಗ್ಗೆ ತರಬೇತಿ ನೀಡಲಾಗುವುದು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧವನ್ನು ನಿಯಂತ್ರಣಗೊಳಿಸಲು ಸೈಬರ್ ಲ್ಯಾಬ್‌ನ ಅಗತ್ಯತೆ ಇತ್ತು ಎಂದು ಸಿಓಡಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

 

ಇತ್ತೀಚೆಗೆ ಹೆಚ್‌ಬಿಸಿ ಯ ನೌಕರ ನದೀಂ ಕಾಶ್ಮೀರಿಯ ಪ್ರಕರಣವನ್ನು ಬಯಲಿಗೆಳೆದ ಕೀರ್ತಿ ಸಿಓಡಿ ಪೋಲಿಸರಿಗೆ ಸಲ್ಲುತ್ತದೆ. ಪೋಲೀಸ್ ಅಧಿಕಾರಿ ಇನ್ನು ಮುಂದೆ, ಮಾಹಿತಿ ಕಾನೂನು, ಹ್ಯಾಕಿಂಗ್(ಅತಿಕ್ರಮಣ), ಗೌಪ್ಯತೆಯ ಬಗ್ಗೆ  ಕಲಿಯಬೇಕಾಗುತ್ತದೆ. ದೇಶದಲ್ಲಿ ಈಗಾಗಲೇ ಮುಂಬಯಿಯಲ್ಲಿ ಎರಡು ಹಾಗೂ ಪೂನಾದಲ್ಲಿ ಒಂದು ಕೇಂದ್ರಗಳಿವೆ . ಪ್ರತಿ ಕೇಂದ್ರವು ಯೋಜನಾ ನಾಯಕನನ್ನು ಹೊಂದಿರುತ್ತದೆ. ಐ.ಟಿ ಕ್ಷೇತ್ರದ ತಜ್ಞರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನ್ಯಾಸ್‌ಕಾಂನ ನಂದಕುಮಾರ್ ಸಾರ್ವದೆ ಹೇಳಿದ್ದಾರೆ.

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com