ಜಾವಾ ದ್ವೀಪದಲ್ಲಿ ಸುನಾಮಿ: ೨೨೬ಕ್ಕೂ ಹೆಚ್ಚು ಬಲಿ
ಜಕಾರ್ತ:
ಒಂದೂವರೆ ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಮಾರಣಾಂತಿಕ ಸುನಾಮಿ ಮತ್ತೆ ಇಂಡೋನೇಷ್ಯಾದಲ್ಲಿ
ತನ್ನ ಕರಾಳ ಮುಖವನ್ನು ತೋರಿಸಿದ್ದು ೨೨೬ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ ನೂರಾ ನಲವತ್ತು
ಮಂದಿ ನಾಪತ್ತೆಯಾಗಿದ್ದಾರೆ.
ಇಂಡೋನೇಷ್ಯಾದ
ಜಾವಾ ದ್ವೀಪದಲ್ಲಿ ಸೋಮವಾರ ಉಂಟಾದ ಪ್ರಬಲ ಭೂಕಂಪದಿಂದಾಗಿ ಪಶ್ಚಿಮ ಕರಾವಳಿಯಲ್ಲಿ
ಸುನಾಮಿ ಅಲೆಗಳು ರುದ್ರನರ್ತನಕ್ಕಿಳಿದವು. ೭.೭ ತೀವ್ರತೆಯ ಭೂಕಂಪ
ಸಮುದ್ರದೊಳಗೆ ಸಂಭವಿಸಿದ ಪರಿಣಾಮವಾಗಿ, ರಕ್ಕಸ ಗಾತ್ರದ ಅಲೆಗಳು ಕಡಲ
ತೀರದ ಉದ್ದಕ್ಕೂ ಚಲಿಸಿ ಅಪಾರ ಸಾವು ನೋವಿಗೆ ಕಾರಣವಾಯಿತು.
ಈ ಭಾಗದ ವಿದ್ಯುತ್
ಸಂಪರ್ಕಗಳು ಕಡಿದುಕೊಂಡಿದ್ದಲ್ಲದೇ, ಜನಜೀವನ-ಸಂಚಾರ ವ್ಯವಸ್ಥೆ
ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಒಂದೂವರೆ ವರ್ಷದ ಹಿಂದಿನ ಕರಾಳ ಸುನಾಮಿ ನೆನಪು ಈ
ಪ್ರದೇಶದ ಜನರಲ್ಲಿ ಮತ್ತೆ ಮರುಕಳಿಸಿದೆ.