|
ಚಿಕ್ಕದಾಗಲಿರುವ ನ್ಯೂಯಾರ್ಕ್
ಟೈಮ್ಸ್ ಆಕಾರ
ಸುದ್ದಿಗಾಗಿ ಮೀಸಲಿಟ್ಟ
ಜಾಗದಲ್ಲಿ ಇಳಿಕೆ
ನ್ಯೂಯಾರ್ಕ್:
೨೦೦೮ನೇ ಇಸವಿಯ ನಂತರ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಆಕಾರವನ್ನು
ಒಂದೊವರೆ ಇಂಚುನಷ್ಟು ಕಮ್ಮಿ ಮಾಡಲಾಗುವುದು ಎಂದು ಮಂಗಳವಾರ ಆವೃತ್ತಿಯಲ್ಲಿ
ಪ್ರಕಟಿಸಲಾಗಿದೆ.
ಪತ್ರಿಕೆ ಮುದ್ರಣ ವ್ಯವಹಾರದಲ್ಲಿ
೪೨ ಮಿಲಿಯನ್ ಡಾಲರ್ ಹಣ ಉಳಿಸುವ ಸಲುವಾಗಿ ನ್ಯೂ ಜೆರ್ಸಿಯ ಮುದ್ರಣ ಕೇಂದ್ರದಿಂದ
೮೦೦ ಜನರನ್ನು ಹೊರದಬ್ಬಲಾಗುತ್ತಿದೆ. ಇದರಿಂದಾಗಿ ಒಟ್ಟು ೧,೦೫೦ ಕೆಲಸಗಾರರು ಕೆಲಸ
ಕಳೆದುಕೊಳ್ಳಲಿದ್ದಾರೆ. ಪತ್ರಿಕೆಯ ಆಕಾರ ಚಿಕ್ಕದಾಗುತ್ತಿರುವುದರಿಂದ ಸುದ್ದಿಗಾಗಿ ಮೀಸಲಿಟ್ಟ
ಶೇ ೧೧ರಷ್ಟು ಜಾಗ ನಷ್ಟವಾಗಲಿದೆ.
ಈಗಾಗಲೇ ಹೆಚ್ಚುತ್ತಿರುವ
ಮುದ್ರಣ ವೆಚ್ಚ ಮತ್ತು ಜಾಹೀರಾತುದಾರರ ವೆಚ್ಚ ಭರಿಸಲು ಆಗದೆ ಯುಎಸ್‌ಎ ಟುಡೇ
ಮತ್ತು ದಿ ವಾಷಿಂಗ್ಟನ್ ಪೋಸ್ಟ್ ಕೂಡ ಈ ಕ್ರಮವನ್ನು ಕೈಗೊಂಡಿದೆ. |