|
ಇನ್ಫೋಸಿಸ್ ನಾರಾಯಣಮೂರ್ತಿಗೆ
ರೋಟರಿ ಪ್ರಶಸ್ತಿ
ಆಗಸ್ಟ್ ೩ರಂದು ಪ್ರಶಸ್ತಿ
ಪ್ರದಾನ ಸಮಾರಂಭ
ಕೋಲ್ಕತ: ಭಾರತೀಯ
ವಾಣಿಜ್ಯ ವಲಯದಲ್ಲಿ ದೊಡ್ಡ ಬದಲಾವಣೆಯನ್ನೇ ತಂದಿರುವ ಇನ್ಫೋಸಿಸ್ ರಾಜಗುರು ಎನ್.ಆರ್.
ನಾರಾಯಣ ಮೂರ್ತಿ ಈ ವರ್ಷದ ರೋಟರಿ ಇಂಟರ್‌ನ್ಯಾಷನಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಾಹಿತಿ ತಂತ್ರಜ್ಞಾನ
ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ರೋಟರಿ ಇಂಟರ್‌ನ್ಯಾಷನಲ್
ಡಿಸ್ಟ್ರಿಕ್ಟ್೩೨೯೦ ನೀಡುವ `ಫೋರ್ ವೇ ಟೆಸ್ಟ್
ಅವಾರ್ಡ್ ಅನ್ನು ನಾರಾಯಣಮೂರ್ತಿಗೆ ನೀಡಲು
ನಿರ್ಧರಿಸಲಾಗಿದೆ.
ಪಶ್ಚಿಮ ಬಂಗಾಳದ
ರಾಜ್ಯಪಾಲ ಗೋಪಾಲ್‌ಕೃಷ್ಣ ಗಾಂಧಿ ಆಗಸ್ಟ್ ೩ರಂದು ನಡೆಯಲಿರುವ ವಿಶೇಷ ಸಮಾರಂಭದಲ್ಲಿ
ನಾರಾಯಣ ಮೂರ್ತಿ ಅವರಿಗೆ ಬೆಳ್ಳಿ ಫಲಕ ನೀಡಿ, ಶಾಲು ಹೊದೆಸಿ ಸನ್ಮಾನ ಮಾಡಲಿದ್ದಾರೆ. |