Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಸದ್ಯವೇ ಮದರಸಾ ಮಂಡಳಿ

ಸಿಬಿಎಸ್‌ಇ ಮಾನದಂಡದಲ್ಲೇ ಮದರಸಾ ಶಿಕ್ಷಣ

 

ನವದೆಹಲಿ : ಮದರಸಾ ಶಿಕ್ಷಣ ವ್ಯವಸ್ಥೆಯನ್ನು ಒಂದು ವ್ಯವಸ್ಥಿತ ಚೌಕಟ್ಟಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಸದ್ಯದಲ್ಲೇ ಕೇಂದ್ರೀಯ ಮದರಸಾ ಮಂಡಳಿ ಸ್ಥಾಪಿಸಲಿದೆ.

 

ಉದ್ದೇಶಿತ ಕೇಂದ್ರೀಯ ಮದರಸಾ ಮಂಡಳಿಯನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಕೇಂದ್ರೀಯ ಹಿರಿಯ ಪ್ರಾಥಮಿಕ ಶಿಕ್ಷಣ ಮಂಡಳಿಯ  (ಸಿಬಿಎಸ್‌ಇ) ಮಾನದಂಡವನ್ನೇ ಮಾದರಿಯಾಗಿಟ್ಟುಕೊಂಡು ಮದರಸಾ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವುದಾಗಿದೆ.

 

ಈಗಾಗಲೇ ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಮಿತಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಮದರಸಾ ಶಿಕ್ಷಣವನ್ನು ಉನ್ನತ ದರ್ಜೆಗೇರಿಸುವಂತೆ ಪ್ರಸ್ತಾವನೆ ನೀಡಲಾಗಿದೆ. ಇದಕ್ಕೆ ಸಿಬಿಎಸ್‌ಇ ಮಾನದಂಡವನ್ನೇ ಮಾದರಿಯಾಗಿಟ್ಟುಕೊಳ್ಳಬೇಕೆಂದು ಶಿಫಾರಸ್ಸು ಮಾಡಲಾಗಿದೆ.

 

ಖ್ಯಾತ ಪತ್ರಕರ್ತರಾದ ಹೆಜಾಮ್ ಸಿದ್ಧಿಖಿ, ಮುಸ್ಲಿಮ ಪರ್ಸನಲ್ ಲಾ ಬೋರ್ಡ್‌ನ ಕಾರ್ಯದರ್ಶಿ ಬಾಲಿ ರೆಹಮಾನ್ ಹಾಗೂ ದೇವ್‌ಬಂದ್ ಶಾಖೆಯ ಕುಲಪತಿಗಳಾದ ಅಂಜಾರ್ ಷಾ ಕಾಶ್ಮೀರಿ ಅವರನ್ನೊಳಗೊಂಡ ಸಮಿತಿಯು ಇನ್ನೊಂದು ತಿಂಗಳಲ್ಲಿ ಮದರಸಾ ಮಂಡಳಿಯನ್ನು ಅಭಿವೃದ್ಧಿ ಪಡಿಸಲಿದೆ.  ಇಂಗ್ಲೀಷ್, ಗಣಿತ, ಸಮಾಜ, ವಿಜ್ಞಾನ, ಕಂಪ್ಯೂಟರ್ ಶಿಕ್ಷಣದಂತಹ ವಿಷಯಗಳನ್ನೊಳಗೊಂಡ ಹೊಸ ಪಠ್ಯಕ್ರಮ ರೂಪಿಸಲು ರೂಪುರೇಶೆಗಳನ್ನು ಸಿದ್ಧಪಡಿಸಲಾಗುವುದು.

 

ಇದಲ್ಲದೇ, ಮದರಸಾಗಳಿಗೆ ಕೇಂದ್ರ ಸರ್ಕಾರ ನೀಡಲಾಗುತ್ತಿರುವ ಅನುದಾನದ ದುರ್ಬಳಕೆಯನ್ನು ತಡೆಗಟ್ಟಲು ನೂತನ ಮಾದರಿಯ ಮಾನದಂಡಗಳನ್ನು ಅಳವಡಿಸಿಕೊಳ್ಳುವತ್ತಲೂ ಕಣ್ಣು ಹರಿಸಲಾಗುವುದು ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.

So

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com