ಬೆಂಗಳೂರಲ್ಲಿ ಬಾಂಬ್
ಸಿಡಿದರೆ ನಿರ್ವಹಣೆ ಹೇಗೆ?
ಬೆಂಗಳೂರು: ಮುಂಬಯಿಯ
ಬಾಂಬ್ ಸ್ಫೋಟ ಬೆಂಗಳೂರಿನಲ್ಲಿ ಸಂಭವಿಸಿದರೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾಲದೆ
ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪೋಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಈಗ ನಗರದಲ್ಲಿ ೧೧
ಕೇಂದ್ರಗಳಿದ್ದು ಅದರಲ್ಲಿ ೪೨೭ ಜನ ಕಾರ್ಮಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ರಾಷ್ಟ್ರೀಯ ಅಗ್ನಿಶಾಮಕ ದಳದ ಸಲಹಾ ಸಮಿತಿಯ ಪ್ರಕಾರ ೫೦, ೦೦೦ ಜನರಿರುವ ಪ್ರದೇಶಕ್ಕೆ
ಒಂದು ಅಗ್ನಿಶಾಮಕ ಕೇಂದ್ರದಂತೆ ಬೆಂಗಳೂರು ಕನಿಷ್ಟ ೧೩೦ ಕೇಂದ್ರಗಳನ್ನು ಹೊಂದಿರಬೇಕಾಗಿತ್ತು.
ಮುಂಬಯಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತೀವ್ರ
ಕಟ್ಟೆಚ್ಚರವಹಿಸಲಾಗುತ್ತಿದೆ.
ಕಳೆದ ವಾರ ಈ ವಿಷಯದ
ಬಗ್ಗೆ ಸದನದಲ್ಲಿ ಗೃಹಸಚಿವ ಎಂ. ಪಿ. ಪ್ರಕಾಶ್ ಮಾತನಾಡುತ್ತಾ ಖಾಲಿ ಉಳಿದಿರುವ ೨,೧೦೮
ಹುದ್ದೆಗಳನ್ನು ಭರ್ತಿ ಮಾಡಲಾಗುವುದೆಂದು ಭರವಸೆ ನೀಡಿದರು. ಆದರೆ ೭೧ ಕ್ಕೂ
ಹೆಚ್ಚಿನ ತಾಲೂಕಿನಲ್ಲಿ ಅಗ್ನಿಶಾಮಕ ಕೇಂದ್ರದ ಕೊರತೆಯಿದೆ.
ಅಗ್ನಿಶಾಮಕ ದಳ, ನಾಗರೀಕ
ಸೇವಾದಳ, ಗೃಹರಕ್ಷಣಾದಳ, ಅಪಘಾತ ಸಹಾಯದಳಗಳ ಮಹತ್ವದ ಅರಿವು ಇನ್ನು
ಸರ್ಕಾರಕ್ಕೆ ಆದಂತಿಲ್ಲವೆಂದು ನುಡಿದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.