|
ಗಣಿಗಾರಿಕೆಯಲ್ಲಿ ಬಾಲಕರ ಬಳಕೆ ನಿಷೇಧಕ್ಕೆ
ಸಿಎಂ ಕ್ರಮ
ಎನ್‌ಡಿಟಿವಿ ವರದಿಯ ಫಲಿತಾಂಶ
ನವದೆಹಲಿ :
ಮುಖ್ಯಮಂತ್ರಿ
ಎಚ್. ಡಿ. ಕುಮಾರಸ್ವಾಮಿ ಬಳ್ಳಾರಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಲ್ಲಿ
ಅಕ್ರಮವಾಗಿ ಬಾಲಕಾರ್ಮಿಕರನ್ನು ಬಳಸಿಕೊಳ್ಳುವ ವಿರುದ್ಧ ಸೂಕ್ತ ಕ್ರಮ
ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ.
ಶುಕ್ರವಾರ ಎನ್‌ಡಿಟಿವಿ
ಅಕ್ರಮ ಗಣಿಗಾರಿಕೆ ಮತ್ತು ಅಲ್ಲಿ ಮಕ್ಕಳನ್ನು ಕಾರ್ಮಿಕರನ್ನಾಗಿ ಬಳಸಿಕೊಳ್ಳುವ
ಕುರಿತು ಪ್ರಸಾರ ಮಾಡಿದ ವಿಶೇಷ ವರದಿಯನ್ನು ನೋಡಿದ ನಂತರ ತಮಗೆ
ಬಳ್ಳಾರಿಯ ಗಣಿಗಾರಿಕೆಯಲ್ಲಿ ಬಾಲಕಾರ್ಮಿಕರನ್ನು ಬಳಸಿಕೊಳ್ಳುವುದನ್ನು ತಿಳಿದು ನಾಚಿಕೆಯಾಗಿದೆ.
ಗಣಿಗಾರಿಕೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳುವ ಕಾರ್‍ಯದಲ್ಲಿ ಭಾಗಿಯಾಗಿರುವ
ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಗಣಿಗಾರಿಕೆ ನಡೆಯುತ್ತಿರುವ
ಪ್ರದೇಶಕ್ಕೆ ಭೇಟಿ ನೀಡಿದ ನಂತರ ಅಲ್ಲಿ ವಾಸಿಸುವ ಜನತೆಗೆ ಮಕ್ಕಳಿಗೆ ಶಿಕ್ಷಣ ನೀಡುವ
ಅಗತ್ಯತೆಯನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ
ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. |