ಬೆಂಗಳೂರು:
ನಿರ್ಮಲ ಶೌಚಾಲಯದ ನೌಕರರಿಗೆ ಬಾಕಿ ಉಳಿದಿದ್ದ ಸಂಬಳ ನೀಡಲು ಬೆಂಗಳೂರು ಮಹಾನಗರ
ಪಾಲಿಕೆ ೧೩ ಲಕ್ಷ ಮೊತ್ತದ ಚೆಕ್ ಅನ್ನು ಬಿಡುಗಡೆ ಮಾಡಿದೆ.
ನಗರದ ೮೬ ನಿರ್ಮಲ
ಶೌಚಾಲಯದಲ್ಲಿನ ಸ್ವಚ್ಛಗೊಳಿಸುವವರು ಹಾಗೂ ನಿರ್ವಾಹಕರು ಸಂಬಳವಿಲ್ಲದೆ ಸಿಗದಿದ್ದರೆ
ಕೆಲಸ ನಿಲ್ಲಿಸುವುದಾಗಿ ಹೇಳಿದ್ದರು. ಬೆಂಗಳೂರು ನಗರ ಸಫಾಯಿ ಕರ್ಮಚಾರಿಗಳ ಪೌರಕಾರ್ಮಿಕರ
ಮತ್ತು ನಿರ್ಮಲ ಶೌಚಾಲಯ ಶುಚಿಗಾರ ಸಂಘದ ಅಧ್ಯಕ್ಷ ಶ್ರೀನಿವಾಸ ನೌಕರರನ್ನು
ಉದ್ದೇಶಿಸಿ ಮಾತನಾಡುತ್ತಾ ಕಳೆದ ನಾಲ್ಕು ತಿಂಗಳಿಂದ ಸಂಬಳದೊರೆತಿಲ್ಲ ಅದರ ಒಟ್ಟು ಮೊತ್ತ
೩೦ ಲಕ್ಷಕ್ಕೂ ಅಧಿಕವಾಗುತ್ತದೆಂದರು.