ಮುಂಬಯಿ:ಮಂಗಳವಾರ ಕಲಂರಿಂದ ಶ್ರದ್ಧಾಂಜಲಿ
ಮಂಗಳವಾರ
೬:೨೫ ರಿಂದ ೬:೨೭ ರವರೆಗೆ ಮುಂಬಯಿ ಮೌನ
ಮುಂಬಯಿ:
೨೦೦ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ಸರಣಿ ಬಾಂಬ್ ಸ್ಪೋಟದ ನಂತರದ
ಪರಿಸ್ಥಿತಿಯ ಪರಿವೀಕ್ಷಣೆಗಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಸೋಮವಾರದಿಂದ
ಎರಡು ದಿನಗಳ ಮುಂಬಯಿ ಭೇಟಿ ಹಮ್ಮಿಕೊಂಡಿದ್ದಾರೆ.
ಸರಣಿ ಬಾಂಬ್ ಸ್ಪೋಟದಲ್ಲಿ
ಮಡಿದವರ ಆತ್ಮಕ್ಕೆ ಶಾಂತಿ ಕೋರಿ ನಗರದ ಮಹೀಮ್ ರೈಲ್ವೇ ನಿಲ್ದಾಣದಲ್ಲಿ
ಮಂಗಳವಾರ ಕಲಾಂ ನೇತೃತ್ವದಲ್ಲಿ ಎರಡು ನಿಮಿಷಗಳ ಮೌನಾಚರಣೆ ಮಾಡಲಾಗುವುದು.
ದುರ್ಘಟನೆಯಲ್ಲಿ ಮೃತಪಟ್ಟವರಿಗೆ
ಗೌರವ ಸೂಚಿಸುವ ದೃಷ್ಟಿಯಿಂದ ಮುಂಬಯಿ ಜನತೆ ಮಂಗಳವಾರ ಸಂಜೆ ೬:೨೫ ರಿಂದ ೬:೨೭
ರವರೆಗೆ ಮೌನ ಆಚರಿಸಲಿದೆ.
ಈ ಸಂದರ್ಭದಲ್ಲಿ,
ಘಟನೆಯಲ್ಲಿ ಗಾಯಗೊಂಡಿರುವವರನ್ನು ವೀಕ್ಷಿಸಲು ಕಲಾಂ ಮುಂಬಯಿನ ಕೆ.ಇ.ಎಮ್.
ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಭಯೋತ್ಪಾದಕ ದಾಳಿಯ ಹಿನ್ನಲೆಯಲ್ಲಿ ಇದೇ ಮೊದಲ
ಬಾರಿಗೆ ಮಹಾರಾಷ್ಟ್ರದಲ್ಲಿ ಮೃತರಿಗೆ ಸಾಮೂಹಿಕವಾಗಿ ಗೌರವ ಸಲ್ಲಿಸುವ ಪ್ರಕ್ರಿಯೆ ಮುಂಬಯಿಯಲ್ಲಿ
ನಡೆಯಲಿದೆ.