ಇಂಡಿಯಾಗೇಟ್:ಹುಸಿಬಾಂಬ್ ಕರೆ ಮಾಡಿದಾತನ ಬಂಧನ
ದೆಹಲಿ: ಫೋನ್
ಮೂಲಕ ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ಬಾಂಬ್ ಇಡಲಾಗಿದೆ ಎಂದು `ಹುಸಿಕರೆ' ಮಾಡಿದ ವ್ಯಕ್ತಿಯನ್ನು
ಪೊಲೀಸರು ಬಂಧಿಸಿದ್ದಾರೆ. ಎರಡನೆಯ ದಿನವೂ ಹುಸಿಬಾಂಬ್ ಬೆದರಿಕೆಗೆ ಒಳಗಾದ
ಇಂಡಿಯಾ ಗೇಟ್ ಪ್ರವೇಶವನ್ನು ನಿಷೇಧಿದಲಾಗಿದೆ.
ಇಂಡಿಯಾ ಗೇಟ್
ಯುದ್ಧ ಸ್ಮಾರಕದಲ್ಲಿ ಸ್ಫೋಟಕಗಳನ್ನಿಡಲಾಗಿದೆ ಮತ್ತು ಅದು ಅಪರಾಹ್ನ ಸ್ಫೋಟಿಸಲಿದೆ
ಎಂಬ ಕರೆ ಬಂದ ತಕ್ಷಣ ಜಾಗೃತರಾದ ಪೊಲೀಸರು, ಬಾಂಬ್ ನಿಗ್ರಹದಳ ಮತ್ತು ಅಗ್ನಿಶಾಮಕದಳದ
ನೆರವಿನಿಂದ ಸ್ಥಳಕ್ಕಾಗಮಿಸಿ ಅಲ್ಲಿ ಸ್ಫೋಟಕಗಳಿಲ್ಲದಿರುವುದನ್ನು ಖಚಿತಪಡಿಸಿಕೊಂಡರು.