ಸದ್ಯವೇ ಇಂಧನ ಬೆಲೆ ಮತ್ತೆ ಏರಿಕೆ ಸಂಭವ
ನವದೆಹಲಿ :
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ದಿನೇ ದಿನೇ ಏರುತ್ತಿದ್ದರೂ
ಕೇಂದ್ರಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇನ್ನೊಂದು ಸುತ್ತು
ಏರಿಸುವ ಕುರಿತು ಚಿಂತಿಸುತ್ತಿದೆ.
ಪಶ್ಚಿಮ ಏಷ್ಯಾದಲ್ಲಿ
ಅನಿಶ್ಚಿತತೆ ನೆಲೆಸಿರುವುದರಿಂದ ತೈಲಬೆಲೆ ಬ್ಯಾರಲ್ ಒಂದಕ್ಕೆ ೭೮.೪೦ ಡಾಲರ್ ಆಗಿದ್ದು, ಅದು
೮೦ ಡಾಲರ್ ತಲಪುವ ಸಂಭವವಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ
ಸರಕಾರ, ಬೆಲೆ ಏರಿಸಬೇಕೇ ಬೇಡವೇ ಎಂಬ ಬಗ್ಗೆ ಆಗಸ್ಟ್ ಒಂದರಂದು ನಿರ್ಧರಿಸಲಿದೆ.