Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಮಹಿಳಾ ಪ್ರಯಾಣಿಕರಿಗೆ ಹ್ಯಾಪಿಜರ್ನಿ

ಮಹಿಳಾ ಪ್ರಯಾಣಿಕರಿಗಾಗಿ ಬಿಎಂಟಿಸಿಯಿಂದ ಎಂಟು ಹೊಸ ಬಸ್‌ಗಳು

 

ಬೆಂಗಳೂರು: ಮಹಿಳೆಯರ ಸುಗಮ ಸಂಚಾರಕ್ಕೆಂದೇ, ಬೆಂಗಳೂರು ಮಹಾನಗರ ಸಂಚಾರ ನಿಗಮ (ಬಿಎಂಟಿಸಿ)ದವರು ಇನ್ನೂ ಎಂಟು ವಿಶೇಷ ಬಸ್‌ಗಳನ್ನು ಸದ್ಯದಲ್ಲೇ ಸಂಚಾರಕ್ಕೆ ಬಿಡುಗಡೆಗೊಳಿಸಲಿದ್ದಾರೆ.

 

ಈಗಾಗಲೇ ಬಿಎಂಟಿಸಿಯ ೮ ಬಸ್‌ಗಳನ್ನು ಮಹಿಳಾ ಮೀಸಲು ಬಸ್ ಎಂಬ ಬೋರ್ಡ್ ಹೊತ್ತು ಸಂಚರಿಸುತ್ತಿವೆ, ಆದರೆ ಅವುಗಳ ಬಳಕೆ ಅಷ್ಟಾಗಿ ಆಗುತ್ತಿಲ್ಲವಾದ್ದರಿಂದ ಬಿಎಂಟಿಸಿ ಸಂಸ್ಥೆ ಇವುಗಳ ಸಂಖ್ಯೆ ದ್ವಿಗುಣಗೊಳಿಸಲು ನಿರ್ಧರಿಸಿದೆ.

 

ಹೊಸದಾಗಿ ಬಿಡುಗಡೆಗೊಳಿಸಲಿರುವ ಬಸ್‌ಗಳು ಹಲವು ಹೊಸತನಗಳಿಂದ ಕೂಡಿರುತ್ತದಲ್ಲದೆ ಸುರಕ್ಷತೆಯತ್ತಲೂ ಹೆಚ್ಚಿನ ಗಮನ ಹರಿಸಲಾಗಿದೆ.

 

ಈ ಬಸ್‌ಗಳು ಜೆ.ಪಿ ನಗರ, ಜಯನಗರ, ರಾಜಾಜಿ ನಗರ ಸೇರಿದಂತೆ ಒಟ್ಟು ಎಂಟು ಕಡೆಗೆ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಈಗಿರುವ ಮಹಿಳಾ ಮೀಸಲು ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಇಲ್ಲದಿದ್ದರೂ ಸಹ ಹೊಸದಾಗಿ ಆರಂಭಿಸಲಿರುವ ಮಾರ್ಗಗಳಲ್ಲಿ ಮಹಿಳಾ ಬಸ್‌ಗಳು ನಿರಂತರವಾಗಿ ಸಂಚರಿಸಲಿವೆ. ಇದರಿಂದ ಮಹಿಳಾ ಬಸ್‌ಗಳ ಬಗ್ಗೆ ಜನರಿಗೆ ಮಾಹಿತಿಯೂ ಲಭ್ಯವಾಗುತ್ತದೆ. ಈವರಗೆ ಮಹಿಳಾ ಮೀಸಲು ಬಸ್‌ಗಳಿಗೆ ಪುರುಷರೇ ನಿರ್ವಾಹಕರಾಗಿದ್ದರು. ಆದರೆ ಇನ್ನು ಮೇಲೆ ಈ ಎಲ್ಲಾ ಬಸ್ಸುಗಳಿಗೆ ಮಹಿಳಾ ನಿರ್ವಾಹಕಿಯರನ್ನೇ ನೇಮಿಸಲಾಗುವುದು. ದಟ್ಟಣೆ ಇರುವ ಪ್ರದೇಶಗಳಲ್ಲಿ ಈ ಬಸ್‌ಗಳ ಬಳಕೆ ಮಾಡಿಕೊಳ್ಳಲಾಗುವುದು. ಇದರಿಂದ ಇನ್ನಷ್ಟು ಸಮರ್ಪಕವಾಗಿ ಮಹಿಳಾ ಮೀಸಲು ಬಸ್‌ಗಳನ್ನು ಬಳಸಿಕೊಂಡಂತಾಗುತ್ತದೆ ಎಂಬುದು ಬಿಎಂಟಿಸಿಯ ಅಭಿಪ್ರಾಯ. ಸೋ, ಮಹಿಳಾ ಪ್ರಯಾಣಿಕರಿಗೆ ಹ್ಯಾಪಿ ಜರ್ನಿ.

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com