Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಛತ್ತೀಸ್‌ಘಡದಲ್ಲಿ ನಕ್ಸಲ್ ದಾಳಿಗೆ ೧೮ ಬಲಿ

ಸೋಮವಾರ ಮುಂಜಾನೆ ನಡೆದ ದಾಳಿ

 

ರಾಯಪುರ : ಛತ್ತೀಸ್‌ಘಡದ ಡಾಂಟೆವಾಡ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಶಸ್ತ್ರಸಜ್ಜಿತ ನಕ್ಸಲೈಟ್‌ಗಳ ದಾಳಿಯಲ್ಲಿ ಕನಿಷ್ಠಪಕ್ಷ ೧೮ ಮಂದಿ ಸಾವಿಗೀಡಾಗಿದ್ದು ಹಲವಾರು ಗ್ರಾಮಸ್ಥರು ಗಾಯಗೊಂಡಿದ್ದಾರೆ.

 

ಇಲ್ಲಿನ ಎರ್ರಾಬೋರೆ ಪುನರ್ವಸತಿ ಕೇಂದ್ರದದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಗ್ರಾಮಸ್ಥರು ವಾಸಿಸುತ್ತಿದ್ದಾರೆ. ಇಲ್ಲಿ ನಕ್ಸಲೈಟ್‌ಗಳು ನಡೆಸಿದ ದಾಳಿಯಲ್ಲಿ ಕನಿಷ್ಠ ೧೮ ಮಂದಿ ಸಾವಿಗೀಡಾಗಿರುವುದಾಗಿ ಜಿಲ್ಲಾಧಿಕಾರಿ ಕೆ. ಆರ್. ಪಿಸ್ಡಾ ಹೇಳಿದ್ದಾರೆ.

 

ನಕ್ಸಲೈಟ್‌ಗಳು ಇಲ್ಲಿನ ಸಿಆರ್‌ಪಿಎಫ್ ಕ್ಯಾಂಪ್ ಮೇಲೂ ದಾಳಿ ನಡೆಸಿದ್ದಾರೆ. ಆದರೆ ಈ ಕುರಿತ ವಿವರಗಳು ಇನ್ನೂ ಲಭ್ಯವಾಗಿಲ್ಲ.

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com