ಗುಲ್ಬರ್ಗ: ಬರ
ಪೀಡಿತ ಗುಲ್ಬರ್ಗ ಜಿಲ್ಲೆಗೆ ನೀರುಣಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ೩೧೫ ಕೋಟಿ ಮೊತ್ತದ
ಬೆಣ್ಣೆತೊರಾ ನೀರಾವರಿ ಯೋಜನೆಯನ್ನು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ದೇಶಕ್ಕೆ
ಸಮರ್ಪಿಸಿದ್ದಾರೆ.
೧೯೭೨ ರಲ್ಲಿ ಶುರುವಾದ
ಈ ಯೋಜನೆ ಅನೇಕ ಸರ್ಕಾರಗಳನ್ನು ಕಂಡಿದೆ. ಭಾನುವಾರ ಗುಲ್ಬರ್ಗಕ್ಕೆ ಮೊದಲಬಾರಿ ಭೇಟಿ
ನೀಡಿದ ಮುಖ್ಯಮಂತ್ರಿ ಬೆಣ್ಣೆತೊರಾ ಜಲಾಶಯಕ್ಕೆ ಬಾಗಿನವನ್ನು ಅರ್ಪಿಸಿದರು.
ಈ ಯೋಜನೆಯಿಂದ
ಚಿತ್ತಾಪುರ ಹಾಗೂ ಸೇಡಂ ತಾಲೂಕಿನ ೫೦,೦೦೦ ಎಕರೆ ಭೂಮಿಗೆ ನೀರುಣಿಸಬಹುದು. ಸದ್ಯಕ್ಕೆ
೨೦,೦೦೦ ಎಕರೆಗೆ ಬಳಸಿಕೊಳ್ಳಲಾಗುವುದು. ನಂತರ ಕಾಲುವೆಗಳ ದುರಸ್ತಿಯಾದ ಮೇಲೆ
ಉಳಿದ ಜಮೀನಿಗೆ ನೀರು ಒದಗಿಸಲಾಗುವುದು.
ಯೋಜನೆಯನ್ನು
ಉದ್ಘಾಟಿಸಿದ ನಂತರ ಮಾತನಾಡಿದ ಹೆಚ್ .ಡಿ. ಕುಮಾರಸ್ವಾಮಿ, ಸರ್ಕಾರವು ಬಾಕಿ ಉಳಿದಿರುವ
೩೯ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ, ಅದರಲ್ಲಿ ಈ ಯೋಜನೆಯು ಮೊದಲನೆಯದು.
ಉಳಿದ ಯೋಜನೆಗಳ ಬಗ್ಗೆ ಸದ್ಯದಲ್ಲೇ ಗಮನ ಹರಿಸಲಾಗುವುದು ಎಂದರು.