ಬೆಂಗಳೂರು ಸುರಕ್ಷತೆಗಾಗಿ
ಅನ್ಯಭಾಷಿಕರ ಗಣತಿ
ಗೃಹ ಮಾಲೀಕರು-ಕೈಗಾರಿಕೆ
ಮಾಲೀಕರಿಗೆ ಸೂಚನೆ
ಬೆಂಗಳೂರು:
ಇತ್ತೀಚೆಗೆ ಮುಂಬೈ ಸರಣಿ ಸ್ಫೋಟದ ನಂತರ ನಗರದಲ್ಲಿ ಭಯೋತ್ಪಾದಕರು
ನುಸುಳದಂತೆ ಕಟ್ಟೆಚ್ಚರ ವಹಿಸಿರುವ ರಾಜ್ಯ ಪೊಲೀಸರು ಬಾಡಿಗೆ ಮನೆಯಲ್ಲಿರುವ ಅನ್ಯ
ಭಾಷಿಕರ ಗಣತಿಯನ್ನು ನಗರದ ಆಯ್ದ ಕೆಲವು ಭಾಗಗಳಲ್ಲಿ ಪ್ರಾರಂಭಿಸಿದ್ದಾರೆ.
ಈಗಾಗಲೇ ಎಲೆಕ್ಟ್ರಾನಿಕ್
ಸಿಟಿಯ ಸಮೀಪದ ಗ್ರಾಮಗಳಲ್ಲಿ ಹೊರರಾಜ್ಯದವರ ಗಣತಿ ಕಾರ್ಯವನ್ನು ಹೆಬ್ಬಗೋಡಿ ಪೊಲೀಸರು
ಪ್ರಾರಂಭಿಸಿದ್ದಾರೆ.
ಇದಲ್ಲದೇ, ನಗರದ
ಹೊರಭಾಗಗಳಲ್ಲಿ ವಾಸಿಸುತ್ತಿರುವ ವಿಪ್ರೋ, ಇನ್ಫೋಸಿಸ್‌ನಂತಹ ಬೃಹತ್
ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ ವರ್ಗದ ಹಾಗೂ ನೌಕರ ವರ್ಗದ
ಮಾಹಿತಿಯನ್ನು ಸಹ ಕಲೆ ಹಾಕಲಾಗುತ್ತಿದೆ.
ಕೈಗಾರಿಕಾ ಪ್ರದೇಶಗಳಾದ
ಬೊಮ್ಮಸಂದ್ರ, ವೀರಸಂದ್ರ, ತಿರುಪಾಳ್ಯ, ಸುಭಾಷ್ ನಗರ, ಸೇರಿದಂತೆ ಇತರ ಪ್ರದೇಶಗಳಲ್ಲಿ
ಉತ್ತರ ಭಾರತದಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಹಿನ್ನೆಲೆಯಲ್ಲಿ ಎಲ್ಲರ ಮಾಹಿತಿಯನ್ನು
ಒದಗಿಸುವಂತೆ ಎಲ್ಲ ಕೈಗಾರಿಕೆಗಳ ಮಾಲೀಕರು ಹಾಗೂ ಬಾಡಿಗೆ ನೀಡಿರುವ ಮನೆ
ಒಡೆಯರಿಗೂ ಮೌಖಿಕವಾಗಿ ತಿಳಿಸಲಾಗಿದೆ. ಅದಲ್ಲದೇ, ಮಹಿಳಾ ಪೇದೆಗಳನ್ನು ಮನೆಮನೆಗೂ
ಕಳುಹಿಸಿ ಅನ್ಯ ಭಾಷಿಕರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಅನ್ಯಭಾಷಿಕರ ಮಾಹಿತಿ
ಕಲೆಗಾಗಿ ಗ್ರಾಮ ಪಂಚಾಯಿತಿ ನೌಕರರನ್ನು ಬಳಸಿಕೊಳ್ಳುವ ಉದ್ದೇಶವಿದೆ ಎಂದು
ಮೂಲಗಳು ತಿಳಿಸಿವೆ.