ವಿಧ್ವಂಸಕ ಕೃತ್ಯಗಳನ್ನು ದಮನಿಸಲಾಗುವುದು : ಪ್ರಧಾನಿ
ಮುಂಬೈ: ಭಯೋತ್ಪಾದಕರ
ವಿಧ್ವಂಸಕ ಕೃತ್ಯಗಳನ್ನು ದಮನಿಸುವ ವಿಷಯದಲ್ಲಿ ಸರಕಾರ ಹಿಂದೇಟು ಹಾಕದು
ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ನವದೆಹಲಿಗೆ
ತೆರಳುವ ಮುನ್ನ ಮಾಧ್ಯಮದವರ ಜತೆ ಮಾತನಾಡುತ್ತಿದ್ದ ಮನಮೋಹನ್ ಸಿಂಗ್,
ಭಯೋತ್ಪಾದಕ ಕೃತ್ಯಗಳಿಗೆ ಗಡಿಯಾಚೆಯಿಂದ ಕುಮ್ಮಕ್ಕು ಸಿಗುತ್ತಿದೆ. ಹೀಗೆ ಮುಂದುವರೆದರೆ
ಉಭಯ ದೇಶಗಳ ನಡುವೆ ಶಾಂತಿ ಮಾತುಕತೆಗೆ ತೊಡಕಾಗುತ್ತದೆ ಎಂದು ನಾನು ಪಾಕಿಸ್ತಾನಕ್ಕೆ
ವಿವರಿಸಿದ್ದೇನೆ ಎಂದು ಪ್ರಧಾನಿ ಹೇಳಿದರು.
ಆಧಾರ ರಹಿತ :
ಪಾಕ್
ಪ್ರಧಾನಿ ಮಾಡಿರುವ
ಆರೋಪಗಳನ್ನು `ತಿರುಳಿಲ್ಲದ ಆರೋಪ' ಎಂಬುದಾಗಿ ಶುಕ್ರವಾರ ಪಾಕ್ ಹೇಳಿದೆ. ಮಾಡಿರುವ
ಎಲ್ಲಾ ಆರೋಪಗಳು ಆಧಾರ ರಹಿತವಾದವು ಮತ್ತು ನಾವು ಅದನ್ನು ಆಗಲೇ
ತಿರಸ್ಕರಿಸಿದ್ದೇವೆ ಎಂದು ಪಾಕ್‌ನ ವಿದೇಶ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.