Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಭಾರತ-ಪಾಕಿಸ್ತಾನ ಶಾಂತಿ ಮಾತುಕತೆ ರದ್ದು

ಬಾಂಬ್‌ಸ್ಫೋಟದ ಹಿಂದೆ ಪಾಕ್ ಕೈವಾಡ

 

ನವದೆಹಲಿ: ಮುಂಬಯಿಯಲ್ಲಿ ನಡೆದ ಸರಣಿ ಬಾಂಬ್‌ಸ್ಫೋಟದಲ್ಲಿ ಪಾಕಿಸ್ಥಾನದ ಕೈವಾಡವಿರುವುದು ಮನವರಿಕೆಯಾಗಿದ್ದು, ಜುಲೈ ೨೧ರಂದು ನಡೆಯಬೇಕಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಕಾರ್‍ಯದರ್ಶಿಗಳ ಮಟ್ಟದ ಮಾತುಕತೆಯನ್ನು ರದ್ದುಪಡಿಸಲಾಗಿದೆ.

 

ಜುಲೈ ೧೧ರಂದು ನಡೆದ ಬಾಂಬ್‌ಸ್ಫೋಟದಲ್ಲಿ ೨೨೯ ಮಂದಿ ಸಾವನ್ನಪ್ಪಿದ್ದು, ೭೭೦ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಈ ಕೃತ್ಯದಲ್ಲಿ ತನ್ನದೇನೂ ಪಾತ್ರವಿಲ್ಲಎಂದು ಪಾಕಿಸ್ತಾನ ಸತತವಾಗಿ ಹೇಳುತ್ತಲೇ ಬಂದಿದ್ದು, ಈ ಕುರಿತ ತನಿಖೆಗೆ ತಾನೂ ಸಹಕರಿಸುವುದಾಗಿ ಪಾಕ್ ಭರವಸೆಯನ್ನೂ ನೀಡಿತ್ತು.

 

ಆದರೆ ಮುಂಬಯಿಗೆ ಭೇಟಿ ನೀಡಿದ ಪ್ರಧಾನಿ ಮನಮೋಹನ್‌ಸಿಂಗ್ ಈ ಕುಕೃತ್ಯದಲ್ಲಿ ಪಾಕಿಸ್ತಾನದ ಕೈವಾಡವಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ತನ್ನ ಗಡಿಪ್ರದೇಶದಲ್ಲಿ ಭಯೋತ್ಪಾದನೆ ನಡೆಸುವುದನ್ನು    ನಿಲ್ಲಿಸದೇ ಇದ್ದಲ್ಲಿ ಶಾಂತಿ ಮಾತುಕತೆಗಳನ್ನು ಮುಂದುವರೆಸುವುದು ಸಾಧ್ಯವಿಲ್ಲ. ಈ ವಿಷಯವನ್ನು ಪಾಕ್‌ಗೆ ಸಾಕಷ್ಟು ಬಾರಿ ತಿಳಿಸಿದ್ದೇವೆ ಎಂದಿದ್ದಾರೆ.

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com