Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ವರಸೆ ಬದಲಿಸಿದ ರೆಡ್ಡಿ: `ಗಣಿ ಗಲಾಟೆ ಅಂತ್ಯ

ಪ್ರಕರಣವನ್ನು ತಿರುಚಿದ್ದಕ್ಕೆ ಧರಂ ಸಿಂಗ್ ಆಕ್ಷೇಪ

 

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಸಂಯುಕ್ತ ಸರ್ಕಾರದಲ್ಲಿ ಪಾಲುದಾರ ಪಕ್ಷದವರಾದ ಭಾರತೀಯ ಜನತಾ ಪಕ್ಷ ಹಾಗೂ ಜನತಾ ದಳ (ಜಾತ್ಯಾತೀತ) ಪಕ್ಷದಲ್ಲಿ ತಲೆದೋರಿದ್ದ `ಮುಖ್ಯಮಂತ್ರಿಯವರ ಗಣಿ ಲಂಚ ಪ್ರಹಸನ ನಾಟಕೀಯ ರೀತಿಯಲ್ಲಿ ಸುಖಾಂತ್ಯ ಕಂಡುಕೊಂಡಿದೆ. ಹತ್ತು ದಿನಗಳ ಹಿಂದೆ ಬಿಜೆಪಿ ಶಾಸಕರಾದ ಜನಾರ್ಧನ ರೆಡ್ಡಿಯವರು ಬಹಳ ವೀರಾವೇಶದಿಂದ ಮಾಧ್ಯಮ ಗೋಷ್ಠಿಯೊಂದನ್ನು ಕರೆದು ಗಣಿ ಮಾಲೀಕರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರು ಕಪ್ಪ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

 

ಇದಾದ ನಂತರ ಬಿಜೆಪಿ ರಾಜ್ಯದ ಮುಖಂಡರು ರೆಡ್ಡಿಯವರ ಮೇಲೆ ವಿವಿಧ ರೀತಿಯ ಒತ್ತಡ ತಂತ್ರಗಳನ್ನು ಹೇರಿ ಅವರ ಹೇಳಿಕೆಯನ್ನು ಹಿಂಪಡೆಯುವಂತೆ ಹೇಳಿದ್ದರೂ ಸಹ ಅವರ ಮಾತಿಗೆ ರೆಡ್ಡಿ ಕವಡೆ ಕಿಮ್ಮತ್ತೂ ನೀಡಿರಲಿಲ್ಲ.

 

ಆದರೆ, ಶುಕ್ರವಾರ ರೆಡ್ಡಿ ಕರೆದ ಮಾಧ್ಯಮಗೋಷ್ಠಿಗೆ ಮುನ್ನ ದೆಹಲಿಯ ಕೆಲವು ಹಿರಿಯ ನಾಯಕರ ಮೂಲಕ ಒತ್ತಡವನ್ನು ಹೇರಿಸಿ, ರೆಡ್ಡಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆದೇಶ ಕೊಡಿಸಲಾಯಿತು. ಈ ಮೂಲಕ ರೆಡ್ಡಿ ಹಾಕಿದ್ದ ಲಂಚದ ಬಾಂಬನ್ನು ಹುಸಿಗೊಳಿಸುವಲ್ಲಿ ಬಿಜೆಪಿ ನಾಯಕರು ಸದ್ಯದ ಮಟ್ಟಿಗೆ ಸಫಲರಾಗಿದ್ದಾರೆ.

 

ಧರಂ ಸಿಂಗ್ ಆಕ್ಷೇಪ : ಗಣಿಗಾರಿಕೆ ಕುರಿತಂತೆ ಜನಾರ್ದನ ರೆಡ್ಡಿ ಹೇಳಿಕೆ ಬದಲಾಯಿಸಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ತಮ್ಮ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಗರಣದ ಬಗ್ಗೆ ಸದನದಲ್ಲಿ ಚರ್ಚೆಗಳು ನಡೆದಿದ್ದು, ರೆಡ್ಡಿ ಸದನದ ಕಾಲಹರಣಕ್ಕೆ ಕಾರಣರಾಗಿದ್ದಾರೆ. ಈ ಕುರಿತು ಮುಖ್ಯಮಂತಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಬೇಕು ಎಂದು ಧರಂಸಿಂಗ್ ಶನಿವಾರ ಒತ್ತಾಯಿಸಿದ್ದಾರೆ.

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com