|
ಮಾಲ್ಗುಡಿ ರೈಲ್
ಓಡುತ್ತದೆ: ರಾಜ್ಯಪಾಲ
ಬೆಂಗಳೂರು: ಖ್ಯಾತ ಲೇಖಕ ಆರ್. ಕೆ. ನಾರಾಯಣನ್ ಸ್ಮಾರಕಾರ್ಥವಾಗಿ ಚೆನೈ ಹಾಗೂ
ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್‌ಗೆ ಮಾಲ್ಗುಡಿ ಎಕ್ಸ್ ಪ್ರೆಸ್ ಎಂದು ಮರುನಾಮಕರಣ
ಮಾಡಬೇಕೆಂದು ರಾಜ್ಯಪಾಲ ಟಿ.ಎನ್.ಚತುರ್ವೇದಿ ರೈಲ್ವೇ ಮಂತ್ರಿ ಲಾಲು ಪ್ರಸಾದ್‌ಗೆ ಪತ್ರ
ಬರೆದಿದ್ದಾರೆ.
ಮೈಸೂರು
ಹಾಗೂ ಮದ್ರಾಸಿ(ಚೆನೈ) ನಲ್ಲಿ ನೆಲೆಸಿದ್ದ ಆರ್.ಕೆ. ನಾರಾಯಣ್ ತಮ್ಮ ಕೃತಿಯಲ್ಲಿ ಸೃಷ್ಟಿಸಿದ ಊರು
ಮಾಲ್ಗುಡಿಯು ಹೆಚ್ಚುಕಮ್ಮಿ ಹಳೆ ಮೈಸೂರು ಪ್ರಾಂತ್ಯವನು ಹೋಲುತ್ತಿತ್ತು. ಅಪಾರ ಸಂಖ್ಯೆಯಲ್ಲಿ
ಅಭಿಮಾನಿಗಳನ್ನು ಹೊಂದಿರುವ ಆರ್‍ಕೆಎನ್ ನೆನಪು ಸದಾ ಉಳಿಯಲಿ ಎಂಬ ಆಶಯದಿಂದ
ಇತಿಹಾಸಕಾರ ರಾಮಚಂದ್ರ ಗುಹ, ಲೇಖಕ ಸುನಾದ್ ರಘುರಾಮ್, ಛಾಯಗ್ರಾಹಕ
ಟಿ.ಎಸ್. ಸತ್ಯನ್ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದರು.
ಇತ್ತೀಚೆಗೆ ಬ್ಲಾಗ್‌ಗಳಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು. ಕೆಲವರು ಮೈಸೂರಿನ
ಕುಕ್ಕರಹಳ್ಳಿ ಕೆರೆಯ ಹಾದಿಗೆ `ನಾರಯಣ್ ಪಥ
ಎಂಬ ಹೆಸರು ಇಟ್ಟರೆ ಚೆನ್ನವೆಂದು ಸೂಚಿಸಿದ್ದರು.
ಮಾಲ್ಗುಡಿ
ಎಕ್ಸ್‌ಪ್ರೆಸ್ ಓಡಲು ಶುರುಮಾಡಿದರೆ ರಾಜ್ಯಪಾಲರಿಗೆ ಧನ್ಯವಾದ ತಿಳಿಸಿ |