|
ಅಗಸ್ಟ್ ೧೪ ರಿಂದ ತಂಪು
ಪಾನೀಯ ನಿಷೇಧ
ಬೆಂಗಳೂರು:
ಸರ್ಕಾರಿ
ಕಚೇರಿ, ಶಾಲಾ-ಕಾಲೇಜು, ಆಸ್ಪತ್ರೆಗಳ ಆವರಣದಲ್ಲಿ ಪೆಪ್ಸಿ, ಕೋಕಾ ಕೋಲಾ ಸೇರಿದಂತೆ
ವಿಷಕಾರಿ ತಂಪು ಪಾನೀಯಗಳ ಮಾರಾಟವನ್ನು ಅಗಸ್ಟ್ ೧೪ ರಿಂದ ನಿಷೇಧಿಸಲಾಗುವುದು
ಎಂದು ಆರೋಗ್ಯ ಸಚಿವ ಆರ್. ಆಶೋಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಲಬರಕೆ
ಆಹಾರ ತಡೆಗಟ್ಟುವ ಕಾನೂನಿನಂತೆ ಶೇ೨೫ ಕ್ಕೂ ಅಧಿಕ ವಿಷಕಾರಿ ಪದಾರ್ಥಗಳನ್ನು ಹೊಂದಿರುವ
ತಂಪು ಪಾನೀಯಗಳ ಮೇಲೆ ನಿಷೇಧ ಹೇರಲಾಗಿದೆ. ಇದರ ಅನ್ವಯ ಶಾಲಾ ಕಾಲೇಜಿನ
ಆವರಣದ ಸುತ್ತ ಮುತ್ತ ೧೦೦ ಅಡಿ ಅಂತರದಲ್ಲಿ ತಂಪು ಪಾನೀಯವನ್ನು ಮಾರಾಟ ಮಾಡಲಾಗುವುದಿಲ್ಲ.
ಜನ ಸಾಮಾನ್ಯರ
ಆರೋಗ್ಯದ ದೃಷ್ಟಿಯಿಂದ ರಾಜ್ಯಾದ್ಯಂತ ಪೆಪ್ಸಿ, ಕೊಕಕೋಲಾ ಮುಂತಾದ ಪಾನೀಯಗಳ ಮೇಲೆ
ನಿಷೇಧ ಹೇರಲು ಮುಖ್ಯಮಂತ್ರಿಗಳ ಸಮಾಲೋಚನೆ ಮಾಡಲಾಗುವುದು ಎಂದು ಸಚಿವರು
ಹೇಳಿದರು. |