Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಪ್ರಮುಖ ಬ್ಯಾಂಕ್‌ಗಳಿಂದ ಬಡ್ಡಿ ದರ ಏರಿಕೆ

 ಮುಂಬೈ: ಕೇಂದ್ರೀಯ ಹಣಕಾಸು ಸಚಿವಾಲಯ ಇತ್ತೀಚೆಗೆ ಎಲ್ಲ ಸಾರ್ವಜನಿಕ ವಲಯದ

ಎಲ್ಲಾ ಬ್ಯಾಂಕುಗಳು ನೀಡುತ್ತಿರುವ ಪ್ರಮುಖ ಸಾಲಗಳ ಮೇಲಿನ ಬಡ್ಡಿಯ ದರವನ್ನು ಏರಿಸಕೂಡದು

 ಎಂದು ನೀಡಿದ ನಿರ್ದೇಶನದ ವಿರುದ್ಧ ಸಾರ್ವಜನಿಕ ಕ್ಷೇತ್ರದ ಅತಿ ದೊಡ್ಡ

ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಇನ್ನಿತರೆ ಕೆಲವು ಬ್ಯಾಂಕುಗಳು

ಸಾರಾಸಗಟಾಗಿ ತಿರಸ್ಕರಿಸಿವೆ.

 

  ಎಲ್ಲ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ನಿರ್ದೇಶಕರ ಮಂಡಳಿಯು ಪ್ರತಿ ವಾರಕ್ಕೊಮ್ಮೆ  ಸಭೆಗಳನ್ನು ನಡೆಸಿ, ಆಯಾ ವಾರದ ವಹಿವಾಟನ್ನು ಗಮನದಲ್ಲಿಟ್ಟುಕೊಂಡು ಬಡ್ಡಿ ದರವನ್ನು ಹೆಚ್ಚಿಸುವ ಅಥವಾ ಕೆಳಗಿಳಿಸುವ ಹಕ್ಕು ಮಂಡಳಿಗಿದೆ.

 

 ಕಳೆದ ಕೆಲವು ದಿನಗಳಿಂದ ಹಣದುಬ್ಬರದ ಪರಿಣಾಮದಿಂದಾಗಿ ದಿನ ಬಳಕೆ ವಸ್ತುಗಳ ಮೇಲೆ ಭಾರಿ ಪರಿಣಾಮ ಉಂಟಾಗಿದ್ದರ ಹಿನ್ನೆಲೆಯಲ್ಲಿ ಸರ್ಕಾರದ ಅಂಗ ಪಕ್ಷವಾದ ಎಡಪಂಥೀಯ ಪಕ್ಷಗಳೂ ಸಹ ಕೇಂದ್ರೀಯ ಹಣಕಾಸು ಸಚಿವಾಲಯಕ್ಕೆ ಹಣದುಬ್ಬರ ನಿಯಂತ್ರಿಸುವಂತೆ ಸೂಚನೆ ನೀಡಿದ್ದವು. ಇದರಂತೆಯೇ ಕೇಂದ್ರೀಯ ಹಣಕಾಸು ಮಂತ್ರಿ ಪಿ.ಚಿದಂಬರಂ ಅವರು ಕೆಲವು ಸಾರ್ವಜನಿಕ ಉದ್ಯಮಗಳಿಗೆ ಪ್ರಮುಖ ಸಾಲಗಳ ಮೇಲಿನ ಬಡ್ಡಿದರ ಕೆಲವು ದಿನಗಳ ಮಟ್ಟಿಗೆ ಏರಿಸದಂತೆ ಮನವಿ ಮಾಡಿಕೊಂಡಿದ್ದರು.

 

ಇದರ ಹೊರತು ಕೂಡ, ಭಾರತೀಯ ಸ್ಟೇಟ್ ಬ್ಯಾಂಕಿನ ಆಡಳಿತ ಮಂಡಳಿ ಸಭೆ ನಡೆಸಿ ಕೆಲವು ಪ್ರಮುಖ ಸಾಲಗಳ ಮೇಲಿನ ಬಡ್ಡಿದರವನ್ನು ಏರಿಸಲು ನಿರ್ಧರಿಸಿದೆ.

 

ಭಾರತೀಯ ಸ್ಟೇಟ್ ಬ್ಯಾಂಕ್ ನಡೆದ ದಾರಿಯಲ್ಲೇ ಆಂಧ್ರ ಬ್ಯಾಂಕ್ ಹಾಗೂ ಬ್ಯಾಂಕ್ ಅಫ್ ಬರೋಡ, ಕೂಡ ತಮ್ಮ ಬಡ್ಡಿದರಗಳನ್ನು ನಿರ್ದೇಶಕ ಮಂಡಳಿ ಏರಿಸಲು ನಿರ್ಧರಿಸಿದೆ.

ಖಾಸಗಿ ಒಡೆತನದ ಬ್ಯಾಂಕುಗಳು ನೀಡುತ್ತಿರುವ ಪ್ರಮುಖ ಸಾಲಗಳ ಮೇಲೆ ಈಗಾಗಲೇ ಶೇ ೧೩ ರಿಂದ ಶೇ ೧೪ ರವರೆಗೆ ಬಡ್ಡಿ ದರಗಳನ್ನು ವಿಧಿಸುತ್ತಿರುವುದರಿಂದ, ನಮ್ಮ ಬ್ಯಾಂಕಿನ ಸಾಲದರಗಳನ್ನು ಏರಿಸದೇ ಹೋದಲ್ಲಿ ಬೇರೆ ತೆರನಾದ ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾದೀತು? ಎಂದು ಬ್ಯಾಂಕಿನ ನಿರ್ದೇಶಕರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com