|
ಪೆಪ್ಸಿ,
ಕೋಲಾ ನಿಷೇಧ ಸಂಭವ
ಬೆಂಗಳೂರು:
ಶಾಲಾ-ಕಾಲೇಜುಗಳ ಆವರಣದಲ್ಲಿ ಪೆಪ್ಸಿ, ಕೋಕಾ ಕೋಲಾ ಸೇರಿದಂತೆ ವಿಷಕಾರಿ ತಂಪು ಪಾನೀಯ
ಗಳು ಮಾರಾಟವನ್ನು ನಿಷೇಧಿಸುವ ಬಗ್ಗೆ ರಾಜ್ಯ ಸಕಾರ ಸದ್ಯದಲ್ಲೇ ತೀರ್ಮಾನ
ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಸುದ್ದಿಗಾರರ
ಜೊತೆ ಮಾತನಾಡುತ್ತಿದ್ದ ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ವಿಷಯ ಪ್ರಕಟಿಸಿದ್ದು ಈ ಸಂಬಂಧ
ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚಿಸಿರುವುದಾಗಿ ಹೇಳಿದ್ದಾರೆ.

ತಂಪು ಪಾನೀಯಗಳ
ನಿಷೇಧ ಕೇವಲ ನಮ್ಮ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲದೇ ಇರುವುದರಿಂದ ವಿವಿಧ
ಇಲಾಖೆ ಅಧಿಕಾರಿಗಳ ಜೊತೆಯೂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಅವರು
ತಿಳಿಸಿದ್ದಾರೆ. |