Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಸಂಸತ್‌ನಲ್ಲಿ ಪಾಠಕ್ ವರದಿ ಮಂಡನೆ

 

ಹೊಸದಿಲ್ಲಿ: ಭಾರೀ ಕೋಲಾಹಲದ ನಡುವೆಯೂ ಉಭಯ ಸದನಗಳಲ್ಲಿ ಪಾಠಕ್ ಆಯೋಗದ ವರದಿಯನ್ನು ಮಂಡಿಸಲಾಗಿದ್ದು, ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಅಕ್ರಮಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ.

ಇರಾನ್‌ನ ಆಹಾರಕ್ಕಾಗಿ ತೈಲ ಹಗರಣ ತನಿಖೆ ನಡೆಸಿದ ಪಾಠಕ್ ಆಯೋಗದ ವರದಿಯನ್ನು ಲೋಕಸಭೆ

ಯಲ್ಲಿ ಹಣಕಾಸು ಸಚಿವ ಚಿದಂಬರಂ ಮಂಡಿಸುವಾಗ ವಿರೋಧ ಪಕ್ಷಗಳ ತೀವ್ರ ಗದ್ದಲ

ಎದುರಿಸಬೇಕಾಯಿತು. ರಾಜ್ಯಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಿ.ಕೆ ಬನ್ಸಲ್ ವರದಿ

ಮಂಡಿಸುವಾಗಲೂ ಗದ್ದಲ ಪುನರಾವರ್ತನೆಯಾಯಿತು.

 

ವರದಿಯಲ್ಲಿ ನಟವರ್ ಸಿಂಗ್ ಮತ್ತು ಜಗತ್ ತಮ್ಮ ಪ್ರಭಾವ ಬಳಸಿ ತೈಲ ಶೇಖರಣೆಯ ಗುತ್ತಿಗೆ ಆಪ್ತರಿಗೆ ನೀಡಲು ಪ್ರಯತ್ನಿಸಿದ್ದು ಸಾಬೀತಾಗಿದೆ. ಇದೇ ವೇಳೆ ಪಾಠಕ್ ವರದಿ ಸೋರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ  ನಟವರ್ ಸಿಂಗ್ ಕಾಂಗ್ರೆಸ್ ಪಕ್ಷ ತಮ್ಮ ವಿರುದ್ಧ ಯಾವುದೇ ಕ್ರಮಕೈಗೊಂಡರೂ ಪರವಾಗಿಲ್ಲ, ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಹಕ್ಕುಚ್ಯುತಿ ಮಂಡನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com