|
ಲಾಟರಿ ನಿಷೇಧಕ್ಕೆ ಸುಪ್ರೀಂಕೋರ್ಟ್
ನಕಾರ
ಬೆಂಗಳೂರು: ಆನ್‌ಲೈನ್ ಲಾಟರಿ ಮೇಲಿನ ನಿಷೇಧ ಅನೂರ್ಜಿತಗೊಳಿಸಿದ ಆದೇಶಕ್ಕೆ ತಡೆ ನೀಡಲು
ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸರ್ವೋಚ್ಚ ನ್ಯಾಯಲಯದ
ತೀರ್ಪಿನ ಹಿನ್ನೆಲೆಯಲ್ಲಿ ಆಗಸ್ಟ್ ೧೪ ರಿಂದ ಸಿಕ್ಕಿಂ ಸರ್ಕಾರ ನಡೆಸುವ ಥಂಡರ್ ಬಾಲ್, ಲಕ್ಕಿ
ತ್ರೀ, ಸೂಪರ್ ಲೊಟ್ಟೊ ಹೆಸರಿನ ಆನ್ ಲೈನ್ ಲಾಟರಿಯನ್ನು ಪುನಃ ಪ್ರಾರಂಭಿಸುವ ಸಾಧ್ಯತೆಯಿದೆ.

ಎಸ್. ಎಂ. ಕೃಷ್ಣ
ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ,
ಸಾರ್ವಜನಿಕ ಹಿತದೃಷ್ಟಿಯಿಂದ ಆನ್‌ಲೈನ್ ಲಾಟರಿ ಮಾರಟವನ್ನು ನಿಷೇಧ ಮಾಡಲಾಗಿತ್ತು.
ರಾಜ್ಯ ಸರ್ಕಾರ
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಶ್ರೇಷ್ಠ ನ್ಯಾಯಾಲಯದ
ವಿಭಾಗೀಯ ಪೀಠ ತಿರಸ್ಕರಿಸಿದೆ. ನ್ಯಾಯಮೂರ್ತಿ
ಅಶೋಕ್‌ಭಾನ್ ಹಾಗೂ ಮಾರ್ಕಂಡೇಯ ಖಟ್‌ಜು ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ
ಎಂದು ತಿಳಿದು ಬಂದಿದೆ.
|