|
ಕೆಎಸ್‌ಟಿಡಿಸಿ ಇಂದ ಲಕ್ಸುರಿ ಬಸ್ ಸೇವೆ
ಬೆಂಗಳೂರು:
ಸುವರ್ಣ ಕರ್ನಾಟಕ ಆಚರಣೆಯ ಹಿನ್ನೆಲೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮವು ೧೦
ಲಕ್ಸುರಿ ಬಸ್‌ಗಳನ್ನು ಜನರ ಸೇವೆಗೆ ನೀಡಿದೆ. ಹವಾನಿಯಂತ್ರಣ ವ್ಯವಸ್ಥೆಯ ಒಂದು ಹಾಗೂ
ಇನ್ನೂ ಎರಡು
ಹವಾನಿಯಂತ್ರಣ
ರಹಿತ
ಕೋಚು(ವಿಭಾಗ) ಗಳನ್ನು ಹೊಂದಿರುತ್ತದೆ. ೧.೮೭ ಕೋಟಿ ವೆಚ್ಚದ ಈ ಬಸ್‌ಗಳನ್ನು ಸೇವೆಗೆ
ಮುಖ್ಯಮಂತ್ರಿ ಹೆಚ್ .ಡಿ .ಕುಮಾರಸ್ವಾಮಿ ಸಾರ್ವಜನಿಕರ ಸೇವೆಗೆ ತೆರವುಗೊಳಿಸಿದರು.

ಹೊಸ ಬಸ್ ಸೇವೆಯನ್ನು
ವಿಶೇಷವಾಗಿ ಪ್ರವಾಸೋದ್ಯಮಕ್ಕಾಗಿ ಬಳಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ
ಶ್ರೀರಾಮುಲು ಹೇಳಿದರು.
ಹೊಸ ಬಸ್
ಗಳನ್ನು ನಿಲ್ಲಿಸಲು ಬೇಕಾದ ಸ್ಥಳಾವಕಾಶ ವ್ಯವಸ್ಥೆಯನ್ನು ಮಾಡಲು ಬೆಂಗಳೂರು ಮಹಾನಗರ
ಪಾಲಿಕೆ ಸಾರಿಗೆಸಂಸ್ಥೆಗೆ ವಹಿಸಲಾಗಿದೆ. ಹೆಚ್ಚಿನ ಸೌಲಭ್ಯ ನೀಡಿ ಪ್ರವಾಸಿಗರನ್ನು ಪ್ರವಾಸ
ತಾಣದತ್ತ ಸುರಕ್ಷಿತವಾಗಿ ಕರೆದೊಯ್ಯುವುದು ನಮ್ಮ ಆದ್ಯತೆ ಎಂದರು. |