|
ಕಾಗಿನೆಲೆಗೆ ಹೊಸ ಪೀಠಾಧಿಪತಿ
ಬೆಂಗಳೂರು:
ಕಾಗಿನೆಲೆ ಕನಕಗುರು ಶಾಖಾ ಮಠದಲ್ಲಿ ಕಿರಿಯ ಸ್ವಾಮಿಯಾಗಿದ್ದ ನಿರಂಜನಾನಂದಪುರಿ ಸ್ವಾಮಿ
ನೂತನ ಜಗದ್ಗುರುಗಳಾಗಿದ್ದಾರೆ. ಈ ವಿಷಯವನ್ನು ಪೀಠದ ಟ್ರಸ್ಟಿ ಮಾಜಿ ಸಚಿವ ಎಚ್.ವಿಶ್ವನಾಥ್
ಸುದ್ದಿಗಾರರಿಗೆ ತಿಳಿಸಿದರು.
ಉತ್ತರ ಕರ್ನಾಟಕದ
ಮೂಲದವರು ಉತ್ತರಾಧಿಕಾರಿಯಾಗಬೇಕೆಂದು ಬೇಡಿಕೆಯಿದ್ದರೂ, ದಕ್ಷಿಣ ಕಡೆಯವರನ್ನು
ಪೀಠಾಧಿಪತಿಯಾಗಿ ನೇಮಕ ಮಾಡಿದ ಕ್ರಮದ ಬಗ್ಗೆ ಮನಸೂರಿನ ರೇವಣಸಿದ್ದೇಶ್ವರ
ಮಹಾ ಮಠದ ಶ್ರೀಬಸವರಾಜ ದೇವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಶ್ರೀ ಬೀರೇಂದ್ರ ಕೇಶವ
ತಾರಕಾನಂದಪುರಿ ಸ್ವಾಮೀಜಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸರಿಯಾದ ಗುರುವನ್ನೇ
ಆಯ್ಕೆಮಾಡಲಾಗಿದೆ. ಈ ಬಗ್ಗೆ ಎರಡು ಮಾತಿಲ್ಲ ಎಂದು ಟ್ರಸ್ಟಿಗಳು ಹೇಳಿದ್ದಾರೆ.
೧೯೯೨ ರಿಂದ
ಅಸ್ತಿತ್ವದಲ್ಲಿರುವ ಕನಕಗುರು ಪೀಠಕ್ಕೆ ನಿರಂಜನಾನಂದ ಪುರಿ ಎರಡನೇ
ಗುರುಗಳಾಗಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು, ಬೆಳಗಾವಿ, ಹಾಗೂ
ಗುಲ್ಬರ್ಗದಲ್ಲಿ ಶಾಖಾಮಠವನ್ನು ಹೊಂದಿದೆ.
ಕುರುಬ ಜನಾಂಗದ ಪ್ರಗತಿಗೆ
ಆದ್ಯತೆ, ಬಡಮಕ್ಕಳಿಗೆ ಶಿಕ್ಷಣ, ಆರ್ಥಿಕವಾಗಿ ಹಿಂದುಳಿದವರ ಏಳಿಗೆಗೆ ಸಮಾಜದ ಸಮಗ್ರ
ಅಭಿವೃದ್ಧಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ನೂತನ ಪೀಠಾಧಿಪತಿಗಳು ಈ ಸಂದರ್ಭದಲ್ಲಿ
ಹೇಳಿದರು. |