ರಾಜ್ಯ ನಿಯೋಗದಿಂದ ಪ್ರಧಾನಿ ಭೇಟಿ
ನವದೆಹಲಿ: ಮುಖ್ಯಮಂತ್ರಿ ಹೆಚ್. ಡಿ.
ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯ ನಿಯೋಗವು ಪ್ರಧಾನಿ ಮನಮೋಹನ್ ಸಿಂಗ್ ರನ್ನು
ಭೇಟಿ ಮಾಡಿತು.
ಪ್ರಧಾನಿ ಜೊತೆಗಿನ ಮಾತುಕತೆಯ ಮುಖ್ಯ ಅಂಶಗಳು
-
ಮಹಾರಾಷ್ಟ್ರದೊಂದಿಗಿನ ಗಡಿ ವಿವಾದ ಬಗ್ಗೆ ಪರಿಹಾರಕ್ಕೆ ಮಹಾಜನ್
ವರದಿಯೇ ಅಂತಿಮ.
-
ಕಳಸಾ ಬಂಡೂರಿ ನಾಲಾಗೆ ಗೋವಾದಿಂದ ಬಂದಿರುವ ಆಕ್ಷೇಪವನ್ನು
ಬೇಗ ಪರಿಹರಿಸುವುದು
-
ನೆರೆ ಹಾವಳಿ ಪರಿಹಾರಿಕ್ಕಾಗಿ ೪೦೦ ಕೋಟಿ ಕೋರಿಕೆ

ಪ್ರಧಾನಿಯೊಡನೆ ಭೇಟಿಯ ನಂತರ ಮಾಜಿ ಪ್ರಧಾನಿ ವಾಜಪೇಯಿ,
ಆಡ್ವಾನಿಯನ್ನು ಭೇಟಿ ಮಾಡಿದರು.
ಆಗಸ್ಟ್ ೨೧ರಂದು ಆಲಮಟ್ಟಿಯ ಉದ್ಘಾಟನಾ
ಕಾರ್ಯಕ್ರಮಕ್ಕೆ ವಾಜಪೇಯಿಯನ್ನು ಆಹ್ವಾನಿಸಲಾಯಿತು.
ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ವಾಜಪೇಯಿಯ ಮಾರ್ಗದರ್ಶನದ
ಅಗತ್ಯವಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಬಿಜೆಪಿಯ ಅನಂತ್
ಕುಮಾರ್, ಸದಾನಂದ ಗೌಡ ನಿಯೋಗದ ಜೊತೆ ಉಪಸ್ಥಿತರಿದ್ದರು.