ರಾಜ್ಯದ ಪ್ರತಿ ಹಳ್ಳಿಗೆ ಒಂದು ಕೋಟಿ ನೆರವು
ರಾಮನಗರ :
ಹಳ್ಳಿಗಳ ಅಭಿವೃದ್ಧಿಗೆ ಒಂದು ಕೋಟಿ ರೂಗಳ ನೆರವು ನೀಡಲು
ಯೋಜನೆಯೊಂದನ್ನು ಹಮ್ಮಿಕೊಂಡು
ನಗರ ಪ್ರದೇಶದಲ್ಲಿ ಕಲ್ಪಿಸಿರುವ ಮೂಲಭೂತ ಸೌಕರ್ಯಗಳನ್ನು ಹಳ್ಳಗಳಿಗೂ
ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ ಸರ್ಕಾರಿ
ಜೂನಿಯರ್ ಕಾಲೇಜು ಮೈದಾನದಲ್ಲಿ ಸರ್ಕಾರದ ಇಲಾಖೆಗಳಿಂದ ಹಮ್ಮಿಕೊಂಡಿದ್ದ ವಿವಿಧ
ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾನುವಾರ
ಅವರು ಮಾತನಾಡುತ್ತಿದ್ದರು.
ಪ್ರತಿವರ್ಷ ಒಂದು ಸಾವಿರ
ಹಳ್ಳಿಗಳನ್ನು ಈ ಕಾರ್ಯಕ್ರಮದಡಿಯಲ್ಲಿ ಆಯ್ಕೆ ಮಾಡಿ ಪ್ರತಿ ಹಳ್ಳಿಗೆ ಒಂದು
ಕೋಟಿಯಂತೆ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.