|
ಕನ್ನಡ ಪದಪರೀಕ್ಷಕದ ಹೊಸ
ಆವೃತ್ತಿ ಬಿಡುಗಡೆ
ಆರನೇ ವರ್ಷಕ್ಕೆ ಕಾಲಿಡುತ್ತಿರುವ
ಕನ್ನಡಸಾಹಿತ್ಯ.ಕಾಂ
ಬೆಂಗಳೂರು
: ಕನ್ನಡ ಸಾಹಿತ್ಯ.ಕಾಂ ಆರನೇ ವರ್ಷಕ್ಕೆ ಕಾಲಿಡುತ್ತಿದ್ದು, ಈ ಕುರಿತ ಕಾರ್‍ಯಕ್ರಮ ಭಾನುವಾರ
ಶೇಷಾದ್ರಿಪುರಂ ಕಾಲೇಜಿನಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ
ಪದ ಪರೀಕ್ಷಕದ ಹೊಸ ಆವೃತ್ತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಡಾ. ಸಿದ್ಧಲಿಂಗಯ್ಯ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾಹಿತಿ
ಡಾ. ಯು. ಆರ್. ಅನಂತ್‌ಮೂರ್ತಿ ಕನ್ನಡ ಭಾಷೆಯು ತಂತ್ರಜ್ಞಾನದ ಜೊತೆಗೆ ಸೆಣಸಾಡಬೇಕಾಗಿದೆ.
ಈ ನಿಟ್ಟಿನಲ್ಲಿ ಕನ್ನಡಸಾಹಿತ್ಯ.ಕಾಂ ಶ್ಲಾಘನೀಯ ಪ್ರಯತ್ನ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಪದ ಪರೀಕ್ಷಕದ
ಬೀಟಾ ತಂತ್ರಾಂಶದ ಮುಂದುವರೆದ(ಅಪ್‌ಡೇಟೆಡ್)ಆವೃತ್ತಿಯ ಸಿಡಿಗಳನ್ನು
ಕಾರ್‍ಯಕ್ರಮಕ್ಕೆ ಆಗಮಿಸಿದವರಿಗೆ ಉಚಿತವಾಗಿ ಹಂಚಲಾಯಿತು. ಕನ್ನಡ ಪರೀಕ್ಷದ ಬೀಟಾ
ಆವೃತ್ತಿ ಈಗಾಗಲೇ ಕನ್ನಡಸಾಹಿತ್ಯ.ಕಾಂನಲ್ಲಿಲಭ್ಯ.(http://www.kannadasaahithya.com/KPP1_0_setup.zip)
ಪದ ಪರೀಕ್ಷಕದ ಹೊಸ ಆವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿಗೆ, ಈ ಹೊಸ ತಂತ್ರಾಂಶದ
ನಿರೂಪಕ ರುದ್ರಮೂರ್ತಿಯವರನ್ನು ಸಂಪರ್ಕಿಸಬಹುದು.
rudramurthy.bs@gmail.com,
(ದೂರವಾಣಿ
: 99453-06202) |