ಬೆಂಗಳೂರು: ವಿದ್ಯುತ್ ತಗುಲಿ ಬಾಲಕಿ ಮರಣ
ಬೆಂಗಳೂರು: ವಿದ್ಯುತ್
ಶಾಕ್ ಹೊಡೆದ ಪರಿಣಾಮ ಹತ್ತು ವರ್ಷದ ಬಾಲಕಿಯೊಬ್ಬಳು ಮೃತ ಪಟ್ಟ ಘಟನೆ
ಕಲಾಸಿಪಾಳ್ಯ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಮಮ್ತರಿನ್ ಎಂಬ ಬಾಲಕಿಯೇ
ಮೃತಪಟ್ಟ ನತದೃಷ್ಟೆಯಾಗಿದ್ದು, ಕಲಾಸಿಪಾಳ್ಯದ ಆರ್. ಆರ್. ಲೇನಿನ ತರಕಾರಿ ಮಾರುಕಟ್ಟೆ
ಸಮೀಪ ಅಣ್ಣಮ್ಮ ದೇವಿಯ ಉತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆಯಿತು.

ಬೆಳಗ್ಗೆಯಿಂದಲೇ ವಿದ್ಯುತ್
ಇಲ್ಲದಿದ್ದರೂ ಸಂಜೆ ವೇಳೆಗೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಅಂಗಡಿಗೆ
ತೆರಳುತ್ತಿದ್ದ ಬಾಲಕಿ ಅಣ್ಣಮ್ಮ ದೇವಿ ಉತ್ಸವದ ನಿಮಿತ್ತ ವ್ಯವಸ್ಥೆಯಾಗಿದ್ದ ವೇದಿಕೆಯ
ತಗಡು ಮುಟ್ಟಿದ ಕೆಲ ಕ್ಷಣದಲ್ಲೇ ಶಾಕ್ ಹೊಡೆದು ನೆಲಕ್ಕೆ ಬಿದ್ದಳೆಂದು ತಿಳಿದು ಬಂದಿದೆ.
ಈ ಸಂಬಂಧ ಕಲಾಸಿಪಾಳ್ಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.