ರಾಮಕೃಷ್ಣ ಹೆಗಡೆ ಸಹೋದರಿ ವಿಧಿವಶ
ಬೆಂಗಳೂರು :
ವಿನೋಭಾ ಭಾವೆ ನಿಕಟವರ್ತಿ , ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಹೋದರಿ ಹಾಗೂ
ಸಮಾಜ ಸೇವಕಿ ಮಹಾದೇವಿ ತಾಯಿ ಭಾನುವಾರ ನಿಧನರಾದರು.
ದೀರ್ಘ ಕಾಲದಿಂದ
ಅಸ್ವಸ್ಥರಾಗಿದ್ದ ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು. ಇಪ್ಪತ್ತು ವರ್ಷಗಳ ಹಿಂದೆ ಮಾಗಡಿ
ಮುಖ್ಯರಸ್ತೆಯಲ್ಲಿ ವಿಶ್ವ ನೀಡಂ ಟ್ರಸ್ಟ್ ಸ್ಥಾಪಿಸಿ ಅದನ್ನು ನಿರ್ವಹಿಸಿಕೊಂಡು ಬಂದ ಹೆಗ್ಗಳಿಕೆ
ಅವರದಾಗಿತ್ತು.
ಮಹಾದೇವಿ ತಾಯಿ ಮೂಲತಃ
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ದೊಡ್ಮನೆಗೆ ಸೇರಿದ್ದವರು. ವಿಶ್ವನೀಡಂ ಟ್ರಸ್ಟ್‌ನ
ತೋಟದಲ್ಲಿ ಭಾನುವಾರ ಸಂಜೆ ಪೋಲೀಸ್ ಗೌರವದೊಂದಿಗೆ ಅವರ ಅಂತ್ಯ ಕ್ರಿಯೆ ನಡೆಯಿತು.