Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ :ಮೈಸೂರಲ್ಲಿ ಚಳವಳಿ

ಮಹಾಜನ್ ವರದಿ ಜಾರಿಗೆ ಆಗ್ರಹ

 

ಮೈಸೂರು : ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ಹಿರಿಯ ಸಾಹಿತಿಗಳು ಚಳವಳಿ ನಡೆಸಿದ್ದಾರೆ.

 

ತಮ್ಮ ಚಳವಳಿಯ ಸಂಕೇತವಾಗಿ ಮೈಸೂರು ನಗರದಲ್ಲಿರುವ ಕೇಂದ್ರ ಸರಕಾರದ ಕಚೇರಿಗಳಿಗೆ ಬೀಗ ಮುದ್ರೆ ಹಾಕುವ ಅಭಿಯಾನವನ್ನು ಸಾಹಿತಿಗಳು ಆರಂಭಿಸಿದ್ದಾರೆ. ಅಂಕಣಕಾರ ಎಚ್ಚೆಸ್ಕೆ ಮತ್ತು ಹಿರಿಯ ಸಾಹಿತಿ ಸಿ.ಪಿ. ಕೃಷ್ಣಮೂರ್ತಿ ಮುಂತಾದವರು ಚಳವಳಿಯಲ್ಲಿ ಭಾಗವಹಿಸಿ ಕೇಂದ್ರದ ಧೋರಣೆಯನ್ನು ಟೀಕಿಸಿದರು.

 

ಮಹಾಜನ ವರದಿಯ ಅನುಷ್ಠಾನಕ್ಕೆ ಕೇಂದ್ರ ಸರಕಾರ ತೋರುತ್ತಿರುವ ವಿಳಂಬ ನೀತಿಯನ್ನು ಟೀಕಿಸಿದ ಎಚ್ಚೆಸ್ಕೆ, ತಮಿಳು ಶಾಸ್ತ್ರೀಯ ಭಾಷೆಯಾಗಿಯೇ ಇದೆ ಎಂದು ಈವರೆಗೆ ಹೇಳುತ್ತಿದ್ದ ತಮಿಳುನಾಡಿನ ಜನತೆ ಈಗ ತಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಕೇಂದ್ರವನ್ನು ಕೋರಿದ್ದಾರೆ. ಈ ವಿಷಯವನ್ನು ರಾಜಕೀಯಕ್ಕೂ ಅನ್ವಯಿಸಿಕೊಂಡು ಕೇಂದ್ರವನ್ನು ಆಗ್ರಹಿಸುತ್ತಿದ್ದಾರೆ.

 

ಕನ್ನಡದ ಕುರಿತು ಕೇಂದ್ರ ತೋರುತ್ತಿರುವ ನಿರ್ಲಕ್ಷ್ಯ ತರವಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂದು ಎಚ್ಚೆಸ್ಕೆ ಸಾಹಿತಿಗಳ ಪರವಾಗಿ ಕೇಂದ್ರವನ್ನು ಆಗ್ರಹಿಸಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com