ಬೆಂಗಳೂರು:
ಸಿಬಿಎಸ್‌ಸಿ ಹಾಗೂ ಐಸಿಎಸ್‌ಸಿ ಕೇಂದ್ರೀಯ ಪಠ್ಯಕ್ರಮ ಅನುಸರಿಸುವ ಶಾಲೆಯವರು ಇನ್ನು
ಮುಂದೆ ಜಿಲ್ಲಾ ಮಟ್ಟದ ಆಟೋಟಗಳಲ್ಲಿ ಪಾಲ್ಗೊಳ್ಳುವಂತಿಲ್ಲ.
ಸಾರ್ವಜನಿಕ ಶಿಕ್ಷಣ
ಇಲಾಖೆಯು ಜೂನ್ ೯ರಂದು ತೆಗೆದುಕೊಂಡ ನಿರ್ಣಯದಂತೆ ಕೇಂದ್ರೀಯ ಪಠ್ಯಕ್ರಮ
ಅನುಸರಿಸುವ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಾಗದು. ಕೇಂದ್ರೀಯ
ಶಾಲೆಯವರ ಪಾಲ್ಗೊಳ್ಳುವಿಕೆಯಿಂದ ರಾಜ್ಯ ಮಟ್ಟದ ಪಠ್ಯಕ್ರಮದಲ್ಲಿ ಓದುತ್ತಿರುವ
ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಇಲಾಖೆಯು ಪ್ರಕಟಿಸಿದೆ.
ಈ ಬಗ್ಗೆ ಸುತ್ತೋಲೆಯನ್ನು
ಎಲ್ಲಾ ಸಿಬಿಎಸ್‌ಸಿ ಹಾಗೂ ಐಸಿಎಸ್‌ಸಿ ಶಾಲೆಗಳಿಗೆ ಕಳುಹಿಸಲಾಗಿದೆ. ರಾಜ್ಯ ಪಠ್ಯಕ್ರಮ ಅನುಸರಿಸುವ
ವಿದ್ಯಾರ್ಥಿಗಳು ಅವಕಾಶ ವಂಚಿತರಾಗದಿರುವಂತೆ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ
ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ತಮ್ಮ ಶಾಲೆಗಳಲ್ಲಿ
ಕನ್ನಡ ಭಾಷೆಯನ್ನು ಅಳವಡಿಸಲಾಗದವರು ಕ್ರೀಡಾಕೂಟಗಳಿಗೂ ಬೇಡ ಎಂದು ಸಚಿವರು
ನುಡಿದರು. ಸಚಿವರ ನಿರ್ಣಯದಿಂದ ಪೋಷಕರು ಅಸಮಧಾನಗೊಂಡಿದ್ದಾರೆ.