Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಬೆಂಗಳೂರು ವಿವಿಯಲ್ಲಿ ಹೊಸ ಬಿಸಿನೆಸ್ ಕೋರ್ಸ್

ಬೆಂಗಳೂರು : ೨೦೦೬-೦೭ನೇ ಶೈಕ್ಷಣಿಕ ವರ್ಷದಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಇಂಟರ್‌ನ್ಯಾಷನಲ್ ಬಿಸಿನೆಸ್ ಎಂಬ ಹೊಸ ಕೋರ್ಸನ್ನು ಆರಂಭಿಸಲು ನಿರ್ಧರಿಸಲಾಗಿದೆ.

 

ರಾಜ್ಯದಲ್ಲಿ ತಲೆದೋರುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳ ಅಗತ್ಯಕ್ಕೆ ತಕ್ಕಂತೆ ಈ ಕೋರ್ಸಿನ ಪಠ್ಯಗಳನ್ನು ನಿರ್ವಹಿಸಲಾಗುವುದು. ಬಹುಸಂಸ್ಕೃತಿ ನಿರ್ವಹಣೆ, ಜಾಗತಿಕ ಸಂಪನ್ಮೂಲ, ಅಂತರರಾಷ್ಟ್ರೀಯ ವ್ಯಾಪಾರ ವ್ಯವಹಾರ, ವಿಶ್ವ ವ್ಯಾಪಾರ ಸಂಸ್ಥೆ ಹಾಗೂ ವಿದೇಶೀ ಭಾಷೆಗಳ ಕುರಿತಂತೆ ಈ ಹೊಸ ಪದವಿಯಡಿಯಲ್ಲಿ ತರಗತಿಗಳನ್ನು ನಡೆಸಲಾಗುವುದು.

 

ಈ ಕೋರ್ಸಿಗೆ ಸೇರಿಕೊಳ್ಳಬೇಕಿದ್ದಲ್ಲಿ ಅರ್ಹತಾ ಪರೀಕ್ಷೆಯನ್ನು ಬರೆಯಬೇಕು. ಪ್ರವೇಶ ಅರ್ಜಿ ಮತ್ತು ಮಾಹಿತಿ ಪತ್ರ ನಗರದ ಕೆ. ಜಿ. ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಬೆಂಗಳೂರು ವಿಶ್ವವಿದ್ಯಾಲಯ : ೦೮೦- ೨೨೯೬೧೯೬೧.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com