Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಸದ್ಯದಲ್ಲೆ ವೈಮ್ಯಾಕ್ಸ್ ಸಿಟಿಯಾಗಿ ಬೆಂಗಳೂರು

ಗೋಪುರಗಳ ಮೂಲಕ ಅಂತರ್ಜಾಲ ತರಂಗಗಳ ಬಿತ್ತರ

 

ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಈ ವರ್ಷಾಂತ್ಯದ ವೇಳೆಗೆ ದೇಶದ ಮೊದಲ `ವೈಮ್ಯಾಕ್ (ವೈರ್‌ಲೆಸ್ ಬ್ರಾಂಡ್‌ಬ್ಯಾಂಡ್) ಸಿಟಿಯಾಗಲಿದೆ.

 

ಯಾವುದೇ ವೈರು, ಕೇಬಲ್ ಸಂಪರ್ಕ ಇಲ್ಲದೆ ಅತಿ ವೇಗದ ಅಂತರ್ಜಾಲ ಸೇವೆಯೇ ವೈಮ್ಯಾಕ್ಸ್. ಇದು ಎಫ್.ಎಮ್. ರೇಡಿಯೋ ಕಾರ್ಯಕ್ರಮಗಳು, ಮೊಬೈಲ್ ದೂರವಾಣಿ ಕರೆಗಳು ಗಾಳಿಯಲ್ಲಿ ತೇಲಿ ಬರುವಂತೆ ಇಂಟರ್‌ನೆಟ್‌ಅನ್ನೂ ಕೂಡ ಇನ್ನು ಮುಂದೆ ಎಲ್ಲೆಂದರಲ್ಲಿ ನಮಗೆ ಒದಗಿಸಲಿದೆ. ಇದಕ್ಕಾಗಿ ವೈರ್‌ಲೆಸ್ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವ ಕಂಪನಿಗಳು ನಗರದ ವಿವಿಧೆಡೆ ಗೋಪುರಗಳ ಮೂಲಕ ಅಂತರ್ಜಾಲ ತರಂಗಗಳನ್ನು ಬಿತ್ತರಿಸಲಿವೆ. ಬೆಂಗಳೂರಿನ ಮೂಲೆ ಮೂಲೆಗೂ ಈ ಅಂತರ್ಜಾಲ ತರಂಗಗಳು ವ್ಯಾಪಿಸಲಿವೆ. ಈ ತರಂಗಗಳನ್ನು ಗ್ರಹಿಸುವ ಪುಟ್ಟ ಉಪಕರಣಗಳನ್ನು ಬಳಸಿ, ಗ್ರಾಹಕರು ಅಂತರ್ಜಾಲ ಸೇವೆಯನ್ನು ಪಡೆಯಬಹುದು.

 

`ವೈಮ್ಯಾಕ್ಸ್ನ ಪ್ರಾಯೋಗಿಕ ಸೇವೆ ಈ ವರ್ಷದ ಅಂತ್ಯದಲ್ಲಿ ಲಭ್ಯವಾಗಲಿದೆ. ಆದರೆ ಬೆಂಗಳೂರಿಗೆ ಎಲ್ಲೆಡೆ ಈ ಸೇವೆ ಸಿಗುವಂತಾಗಲು ಒಂದೆರಡು ವರ್ಷಗಳು ಬೇಕಾಗಬಹುದು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com