Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಸ್ಯಾಬ್‌ಮಿಲ್ಲರ್‌ನ ಹೊಸ ಒಪ್ಪಂದ, ಯುಬಿ ಮಲ್ಯಗೆ ಆತಂಕ

 

ಮುಂಬೈ: ವಿಶ್ವದ ಅತಿದೊಡ್ಡ ಡಿಸ್ಟಿಲರಿ ಸಂಸ್ಥೆಯಾದ ದಕ್ಷಿಣ ಆಫ್ರಿಕಾ ಮೂಲದ ಸ್ಯಾಬ್ ಮಿಲ್ಲರ್ ಪ್ಲಾಕರ್ಡ್ ಸಂಸ್ಥೆಯು ಆಸ್ಟ್ರೇಲಿಯ ಮೂಲದ ಫಾಸ್ಟರ್ ಬಿಯರ್ ಸಂಸ್ಥೆಯ ಎಲ್ಲ ಚರಾ ಚರ ಆಸ್ತಿಗಳನ್ನು ೧೨೦ ದಶಲಕ್ಷ ಡಾಲರ್‌ಗಳನ್ನು ನೀಡಿ ಭಾರತ ಹಾಗೂ ಏಷಿಯಾದ ಇನ್ನಿತರೇ ಭಾಗಗಳಲ್ಲಿ ಫಾಸ್ಟರ್ ಬಿಯರ್‌ನ ಮಾರಾಟ ಹಾಗೂ ತಯಾರಿಕೆ ಹಕ್ಕನ್ನು ಪಡೆದುಕೊಂಡಿದೆ.

 

ಸ್ಯಾಬ್ ಮಿಲ್ಲರ್ ಸಂಸ್ಥೆಯ ಈ ಖರೀದಿಯೊಂದಿಗೆ ಬಿಯರ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಸುಭದ್ರಗೊಳಿಸಿದೆ.

 

ಖ್ಯಾತ ಹೆಂಡದ ದೊರೆ ವಿಜಯ ಮಲ್ಯ ನೇತೃತ್ವದ ಯುಬಿ ಸಂಸ್ಥೆಯ ಬಿಯರ್ ಒಟ್ಟು ಮಾರುಕಟ್ಟೆಯ ಶೇ ೪೬ರಷ್ಟನ್ನು ಈಗಲೂ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರೆ, ಸ್ಯಾಬ್ ಮಿಲ್ಲರ್ ಸಂಸ್ಥೆಯು ಒಟ್ಟು ೩೫ ದಶಲಕ್ಷ ರೂ ಬೆಲೆಯ ಪೆಟ್ಟಿಗೆ ಬಿಯರ್‌ಗಳನ್ನು ಮಾರಿ ದ್ವಿತೀಯ ಸ್ಥಾನದಲ್ಲಿದೆ.

 

ಸ್ಯಾಬ್ ಮಿಲ್ಲರ್ ಸಂಸ್ಥೆಯು ಆಸ್ಟ್ರೇಲಿಯನ್ ದೇಶದ ಫಾಸ್ಟರ್‍ಸ್ ಬಿಯರ್ ಬ್ರಾಂಡನ್ನು ಖರೀದಿಸಿರುವುದರಿಂದ ಬಿಯರ್ ಮಾರುಕಟ್ಟೆಯಲ್ಲಿ ಯುಬಿ ಸಂಸ್ಥೆ ಹಾಗೂ ಸ್ಯಾಬ್ ಮಿಲ್ಲರ್ ಸಂಸ್ಥೆಯ ನಡುವೆ ಶೀತಲ ಸಮರಕ್ಕೆ ನಾಂದಿಯಾಗಬಹುದೆಂದು ಮಾರುಕಟ್ಟೆ ವಿಶ್ಲೇಷಕರು ಈಗಾಗಲೇ ವಿಶ್ಲೇಷಿಸುತ್ತಿದ್ದಾರೆ.

 

ಕಳೆದ ಐದಾರು ತಿಂಗಳಲ್ಲಿ ಸ್ಯಾಬ್ ಮಿಲ್ಲರ್ ಸಂಸ್ಥೆಯ ಪ್ರಮುಖ ಬಿಯರ್ ಬ್ರಾಂಡ್‌ಗಳಾದ ಹೇವಾರ್ಡ್ ಹಾಗೂ ಇನ್ನಿತರೆ ಬ್ರಾಂಡ್‌ಗಳು ಶೇ. ೨ ರಷ್ಟು ಹೆಚ್ಚು ಮಾರಾಟಗೊಂಡಿದ್ದರೆ, ಅದೇ ಕಾಲದಲ್ಲಿ ಯುಬಿ ಸಂಸ್ಥೆಯ ಬಿಯರ್ ಮಾರಾಟದಲ್ಲಿ ಶೇ ೨೦ ರಷ್ಟು ಇಳಿಮುಖಗೊಂಡಿದೆ. ಇದರಿಂದ ಯುಬಿ ಸಂಸ್ಥೆಗೆ ಮುಂಬರುವ ದಿನಗಳಲ್ಲಿ ಇದೊಂದು ತಲೆನೋವಾಗಿ ಪರಿಣಮಿಸಲಿದೆ.

 

ಫಾಸ್ಟರ್ ಬಿಯರ್‌ನ ಸಂಪೂರ್ಣ ಜಾಲದ ಸ್ವಾಧೀನದಿಂದಾಗಿ ಸ್ಯಾಬ್ ಮಿಲ್ಲರ್ ಸಂಸ್ಥೆಯ ಒಟ್ಟು ಉತ್ಪಾದನಾ ಕ್ಷಮತೆ ಒಮ್ಮಿಂದೊಮ್ಮಿಗೆ ಶೇ ೧೦ ರಷ್ಟು ಹೆಚ್ಚಾಗಲಿದೆ ಹಾಗೂ ಹೆಚ್ಚು ಪ್ರದೇಶಗಳಲ್ಲಿ ತನ್ನ ಸ್ವಂತ ಬ್ರಾಂಡ್‌ಗಳನ್ನು ಮಾರಾಟ ಮಾಡುವ ಅವಕಾಶ ಈ ಸಂಸ್ಥೆಗೆ ದಕ್ಕಿದೆ.

 

ಫಾಸ್ಟರ್ ಬಿಯರ್ ಸಂಸ್ಥೆಯು ೧೦ ಉತ್ಪಾದಕ ಘಟಕಗಳೂ ಈ ಸ್ವಾಧೀನ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದರಿಂದ ಸ್ಯಾಬ್ ಮಿಲ್ಲರ್ ಸಂಸ್ಥೆ ತನ್ನೆಲ್ಲ ಉತ್ಪನ್ನಗಳ ಉತ್ಪಾದನಾ ಬೆಲೆಗಳಲ್ಲಿ ಸಾಕಷ್ಟು ಇಳಿಮುಖವಾಗುವುದರಿಂದ ಪ್ರಮುಖ ಬ್ರಾಂಡ್‌ಗಳ ಬೆಲೆಗಳನ್ನು ಇಳಿಸಬಹುದೆಂಬ ನಿರೀಕ್ಷೆ ಇದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com