ಆಸ್ತಿ ಆರೋಪದ ವಿರುದ್ದ ಸಿವಿಲ್ ಮೊಕದ್ದಮೆ
ಬೆಂಗಳೂರು:
ತಮ್ಮ ಕುಟುಂಬದ ಸದಸ್ಯರ ಆಸ್ತಿ ಖರೀದಿ ಕುರಿತು ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದಲ್ಲದೆ
ತಮ್ಮ ಚಾರಿತ್ಯ ವಧೆ ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಸಿವಿಲ್ ಮೊಕದ್ದಮೆ
ಹೂಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಶುಕ್ರವಾರ ಸುದ್ದಿಗಾರರ
ಜೊತೆ ಮಾತನಾಡುತ್ತಿದ್ದ ಅವರು ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ
ಆಸ್ತಿ ಖರೀದಿ ಬಗ್ಗೆ ಆರೋಪ ಮಾಡಲಾಗುತ್ತಿದೆ. ಇದರಲ್ಲೂ ಯಾವುದೇ ಹುರುಳಿಲ್ಲ ಎಂದು
ನಿರಾಕರಿಸಿದ್ದಾರೆ.
ತಮ್ಮ
ಕುಟುಂಬದವರ ವಿರುದ್ಧ ಬಂದಿರುವ ಯಾವುದೇ ಆರೋಪಗಳಿಗೆ ಇನ್ನು ಮುಂದೆ ಪ್ರತಿಕ್ರಿಯಿಸಲು
ಇಷ್ಟಪಡುವುದಿಲ್ಲ ಸಿವಿಲ್ ಮೊಕದ್ದಮೆ ಹೂಡುವುದೇ ತಮ್ಮ ಅಂತಿಮ ನಿರ್ಧಾರ ಎಂದು
ಅವರು ಹೇಳಿದ್ದಾರೆ.