|
ಪಾಲ್ಕೆ ಪ್ರಶಸ್ತಿ
ಕಣದಲ್ಲಿ ಸುಚಿತ್ರಾ ಸೇನ್
ಆದರೆ ಏಕಾಂತವಾಸಿ
ಸುಚಿತ್ರಾ ಸೇನ್ ಭೇಟಿ ಕಷ್ಟ
ನವದೆಹಲಿ:
ಈ ಬಾರಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಬೆಂಗಾಲಿ ಚಿತ್ರರಂಗದ ದಂತಕತೆ ಸುಚಿತ್ರ ಸೇನ್
ಪಾಲಾಗುವ ನಿರೀಕ್ಷೆ ಇದೆ. ಆದರೆ ಏಕಾಂತ ವಾಸದಲ್ಲಿರುವ ಸೇನ್ ಪ್ರಶಸ್ತಿ ನಿರಾಕರಿಸುವ ಭಯ
ಆಯ್ಕೆ ಸಮಿತಿಯನ್ನು ಕಾಡುತ್ತಿದೆ.

`ಸಾತ್
ಪಾಕೆ ಬಂಧಾ ಚಿತ್ರಕ್ಕಾಗಿ ೧೯೬೩ರ ಮಾಸ್ಕೋ
ಚಲನಚಿತ್ರೋತ್ಸವದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಸುಚಿತ್ರಾ ಸೇನ್ ಅವರೇ ಈ ಬಾರಿ ಪಾಲ್ಕೆ
ಪ್ರಶಸ್ತಿ ಪಡೆಯುವ ಅದೃಷ್ಟಶಾಲಿ ಎಂದು ಊಹಿಸಲಾಗಿದೆ. ಆದರೆ ಸುಲೋಚನ ಹಾಗೂ
ಗುಲ್ಜಾರ್ ಕೂಡ ಸಂಭಾವ್ಯ ಪಟ್ಟಿಯಲ್ಲಿರುವುದು ಇನ್ನೊಂದು ವಿಶೇಷತೆ.
ಈ
ಬಾರಿಯ ಆಯ್ಕೆ ಸಮಿತಿ ಮೃಣಾಲ್ ಸೇನ್, ಅಡೂರು ಗೋಪಾಲ್‌ಕೃಷ್ಣನ್, ಎ. ನಾಗೇಶ್ವರ
ರಾವ್ ಹಾಗೂ ಯಶ್ ಚೋಪ್ರ ಅವರನ್ನು ಒಳಗೊಂಡಿದೆ.
ಗುಲ್ಜಾರ್ ನಿರ್ದೇಶನದ
ರಾಜಕೀಯ ವಿವಾದಗಳನ್ನೊಳಗೊಂಡ `ಆಂಧಿ
ಚಿತ್ರದಿಂದ ಮನೆಮಾತಾಗಿರುವ ಸುಚಿತ್ರಾಸೇನ್‌ಗೆ ಪ್ರಶಸ್ತಿ ನೀಡಲು ಸರ್ಕಾರ ಅದರಲ್ಲೂ ಮಾಹಿತಿ
ಮತ್ತು ಪ್ರಸಾರ ಖಾತೆ ಸಚಿವ ಪಿ.ಆರ್.ದಶ್‌ಮುನ್ಸಿ ಉತ್ಸುಕರಾಗಿದ್ದರೂ, ಸೇನ್ ಅವರನ್ನು
ಭೇಟಿ ಮಾಡುವುದು ಅಷ್ಟು ಸುಲಭವಲ್ಲ. ಕಳೆದ ಮೂರು ವರ್ಷಗಳಿಂದ ಏಕಾಂತ ವಾಸದಲ್ಲಿರುವ
ಸೇನ್ ಅವರನ್ನು ಭೇಟಿಮಾಡಿದ ನಂತರವೇ ಪ್ರಶಸ್ತಿ ಸ್ವೀಕರಿಸಲು ಅವರು ಒಪ್ಪುತ್ತಾರೆಯೇ
ಎಂಬುದು ಗೊತ್ತಾಗುತ್ತದೆ ಎಂದು ತಿಳಿಯಬಹುದು ಎಂದಿದ್ದಾರೆ.
|