ಹೈಟೆಕ್ ಸಿಟಿಗೆ ಬರಲಿವೆ ೪ ಕನ್ನಡ ಭವನಗಳು
ಬೆಂಗಳೂರು: ಸುವರ್ಣ
ಕರ್ನಾಟಕ ಆಚರಣೆ ಪ್ರಯುಕ್ತ ನಗರದ ಮುಖ್ಯ ದ್ವಾರದಲ್ಲಿ ನಾಲ್ಕು ಕನ್ನಡ ಭವನಗಳು
ನಿರ್ಮಾಣಗೊಳ್ಳಲಿವೆ.
ರಸ್ತೆ ಸಾರಿಗೆ ಸಂಸ್ಥೆಯ
ರಾಜ್ಯ ಘಟಕದ ಸುತ್ತಲಿನ ೧೫ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಸಭಾಂಗಣಕ್ಕೆ
ಪೂರಕವಾಗಿ ಕೆಂಗಲ್ ಹನುಮಂತಯ್ಯ ಜೋಡಿ ರಸ್ತೆ ನವೀಕರಣಗೊಳ್ಳಲಿದೆ.
ಸುವರ್ಣ ಕರ್ನಾಟಕ
ಆಚರಣೆ ಕುರಿತು ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಮಾತನಾಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕನ್ನಡ ಭವನಗಳ ನಿರ್ಮಾಣ ಕಾರ್ಯ ಹಾಗೂ
ನವೀಕರಣವನ್ನು ಶೀಘ್ರವೇ ಕೈಗೆತ್ತಿಕೊಳ್ಳಲಿದೆ ಎಂದರು.
ಸುವರ್ಣ ಕರ್ನಾಟಕ
ಆಚರಣೆ ನವೆಂಬರ್ ೧, ೨೦೦೬ ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು,
೨೦೦೭ ನವೆಂಬರ್ ತಿಂಗಳಲ್ಲಿ ಕೊನೆಗೊಳ್ಳಲಿದೆ.
ಆಚರಣೆಯ ಸ್ಮರಣಾರ್ಥ
ಅಂಚೆ ಚೀಟಿಯನ್ನು ಹೊರತರುವಂತೆ ಕೇಂದ್ರವನ್ನು ಕೋರಲಾಗಿದೆ ಎಂದು ಅವರು
ತಿಳಿಸಿದರು.