Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

೨೦೩೦ರೊಳಗೆ ಚಂದ್ರನಲ್ಲಿ ನೆಲೆ - ಜಪಾನ್ ಯೋಜನೆ


    ಟೋಕಿಯೋ: ಚಂದ್ರ ಗ್ರಹದ ಮೇಲೆ ವಾಸಸ್ಥಳ ಸ್ಥಾಪಿಸುವ ಉದ್ದೇಶವನ್ನು ಹೊಂದಿರುವುದಾಗಿ ಜಪಾನ್‌ನ ವೈಮಾನಿಕ ಸಂಸ್ಥೆ ಪ್ರಕಟಿಸಿದೆ.

    ಜಪಾನ್ ಚಂದ್ರಯಾನ ಹಾಗೂ ಅಂತರಿಕ್ಷ ನೌಕಾಯಾನದ ಮುಖ್ಯಸ್ಥ ಜುನಿಚಿರೋ ಕವಾಗುಚಿ ಇಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮಾತನಾಡುತ್ತಾ ಚಂದ್ರ ಗ್ರಹಕ್ಕೆ ಗಗನಯಾತ್ರಿಗಳನ್ನು ೨೦೨೦ರ ಒಳಗೆ ಕಳುಹಿಸಲಾಗುವುದು, ೨೦೩೦ ರ ಒಳಗೆ ಚಂದ್ರನಲ್ಲಿ ನೆಲೆಯನ್ನು ಸ್ಥಾಪಿಸಲಾಗುವುದು ಎಂದರು.

    ಈ ಯೋಜನೆಯು ಇನ್ನೂ ಚರ್ಚೆಯ ಹಂತದಲ್ಲಿದ್ದು ಜಪಾನ್ ಅಂತರಿಕ್ಷ ಸಂಶೋಧನಾ ಕೇಂದ್ರ(ಜೆಎಎಕ್ಸ್‌ಎ) ಯೋಜನೆಗೆ ಹಣವನ್ನು ಮಂಜೂರು ಮಾಡಿಲ್ಲ. ಯೋಜನೆಗೆ ೩ ಟ್ರಿಲಿಯನ್ ಯೆನ್(೨೬ ಬಿಲಿಯನ್ ಡಾಲರ್) ಗಳು ವೆಚ್ಚವಾಗುವ ಸಾಧ್ಯತೆಯಿದೆ.

    ಜಪಾನ್‌ನ ಯೋಜನೆಯ ಬಗ್ಗೆ ಈಗಾಗಲೇ ಇತರ ದೇಶಗಳು ಅಚ್ಚರಿ ವ್ಯಕ್ತಪಡಿಸಿವೆ. ಯೋಜನೆಯ ಮೊದಲ ಹಂತವಾಗಿ ಮುಂದಿನ ವರ್ಷದೊಳಗೆ ಉಪಗ್ರಹವೊಂದನ್ನು ಚಂದ್ರನೆಡೆಗೆ ಕಳುಹಿಸಲಾಗುವುದು ಎಂದು ಕವಾಗುಚಿ ಹೇಳಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com