|
ದೆಹಲಿ ಮಠದಲ್ಲಿ ರಾಘವೇಂದ್ರ ಸ್ವಾಮಿ ಆರಾಧನೆ
ದೆಹಲಿ: ಶ್ರೀ ರಾಘವೇಂದ್ರ ಸ್ವಾಮಿಗಳ ೩೩೫ ನೇ ಆರಾಧನಾ ಮಹೋತ್ಸವವು ಅಗಸ್ಟ್ ೧೦
ರಂದು ಆರಂಭವಾಗಲಿದೆ.
೪ ದಿನದ ಕಾರ್ಯಕ್ರಮದ ವಿಶೇಷತೆ ಹೀಗಿದೆ:
ದಿನಾಂಕ ೯ ರಂದು ಪ್ರಾರಂಭೋತ್ಸವ, ಉಪಾಕರ್ಮ, ಧ್ವಜಾರೋಹಣ, ಗೋಪೂಜೆ, ಧಾನ್ಯಪೂಜೆ,
ಶಾಸ್ತ್ರ ಸೌರಭ, ದಾಸರ ಕೀರ್ತನೆಗಳ ಅಂತ್ಯಾಕ್ಷರಿ ಮತ್ತಿತರ ಧಾರ್ಮಿಕ
ಕಾರ್‍ಯಕ್ರಮಗಳು ಇರುತ್ತವೆ.
೧೦ ರಂದು ಸಂಗೀತ ಸೌರಭ, ಶುಭ ದೇವಿಪ್ರಸಾದ್‌ರಿಂದ ಕರ್ನಾಟಕ ಶಾಸ್ತ್ರೀಯ ಗಾಯನವಿರುತ್ತದೆ.
೧೧ ರಂದು ಶ್ಯಾಮಲಾ ರಾಧಕೃಷ್ಣರಿಂದ ಗೀತ ಗಾಯನ, ಸುದರ್ಶನ ಹೋಮ, ವಂಶಿ
ಕೃಷ್ಣಾಚಾರ್ಯರಿಂದ ಪ್ರವಚನ.
೧೨ರಂದು ಉತ್ತರ ಆರಾಧನೆಯಲ್ಲಿ ಮಹಾರಥೋತ್ಸವ, ವೇಣುವಾದನ
ಕಾರ್ಯಕ್ರಮವಿರುತ್ತದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಆಗಮಿಸಿ ಸ್ವಾಮೀಜಿಯಿಂದ ಆಶೀರ್ವಚನ ಪಡೆಯಬೇಕಾಗಿ
ಶ್ರೀ ಮಠದ ವ್ಯವಸ್ಥಾಪಕ ರಘುನಂದನಾಚಾರ್ಯ ಕೋರಿದ್ದಾರೆ.
ಹೆಚ್ಚಿನ
ವಿವರಗಳಿಗಾಗಿ ಸಂಪರ್ಕಿಸಿ:
ರಘುನಂದನಾಚಾರ್ಯ(ವ್ಯವಸ್ಥಾಪಕ)-09868303918
ರಾಘವೇಂದ್ರ ಕುಲಕರ್ಣಿ-09868957942
ವಂಶೀ ಕೃಷ್ಣ-09868957940 |