|
ಪೆಪ್ಸಿ-ಕೋಲಾ
ನಿಷೇಧಕ್ಕೆ ಒತ್ತಾಯ
ನವದೆಹಲಿ : ಪೆಪ್ಸಿ ತಂಪು ಪಾನೀಯಗಳಲ್ಲಿ ವಿಷಕಾರಿ ಕೀಟನಾಶಕ
ಮತ್ತೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವುಗಳ ಮಾರಾಟವನ್ನು ನಿಷೇಧಿಸಬೇಕು
ಎಂದು ಲೋಕಸಭೆಯಲ್ಲಿ ಸದಸ್ಯರು ಒತ್ತಾಯಿಸಿದ್ದಾರೆ.
ವಿಜ್ಞಾನ ಮತ್ತು ಪರಿಸರ ಕೇಂದ್ರದ ವರದಿಯನ್ನು ಆಧರಿಸಿ
ಕೋಕಾ ಕೋಲ, ಪೆಪ್ಸಿಕೋಲ ಹಾಗೂ ಇತರೆ ೯ ಲಘು ಪಾನೀಯಗಳನ್ನು ನಿಷೇಧಿಸಬೇಕು
ಎಂದು ಸದಸ್ಯರು ಆಗ್ರಹಿಸಿದ್ದಾರೆ.
ಬಿಜೆಪಿ, ಎಡ ಪಕ್ಷಗಳು, ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷದ
ಸದಸ್ಯರು ಗುರುವಾರ ಶೂನ್ಯ ವೇಳೆಯಲ್ಲಿ ಒತ್ತಾಯಿಸಿದಾಗ, ಆಹಾರ ಸುರಕ್ಷತೆ
ಗುಣಮಟ್ಟಕ್ಕೆ ಸಂಬಂಧಪಟ್ಟಂತೆ ಸಂಸತ್ತು ಈಗಾಗಲೇ ಮಸೂದೆಯೊಂದನ್ನು
ಅಂಗೀಕರಿಸಿದ್ದು, ರಾಷ್ಟ್ರಪತಿಗಳ ಸಹಿಗಾಗಿ ಕಾಯಲಾಗುತ್ತಿದೆ ಎಂದು ಸಂಸದೀಯ
ವ್ಯವಹಾರಗಳ ಸಚಿವ ಪಿ.ಆರ್. ದಾಸ್‌ಮುನ್ಷಿ ತಿಳಿಸಿದ್ದಾರೆ. |