Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ನಟವರ್‌ರಿಂದ ಅಧಿಕಾರ ದುರುಪಯೋಗ ?


     ನವದೆಹಲಿ: ದೇಶ ವಿದೇಶದಲ್ಲಿ ಕೋಲಾಹಲ ಎಬ್ಬಿಸಿದ್ದ `ಆಹಾರಕ್ಕಾಗಿ ತೈಲ (ವೋಲ್ಕರ್)ಹಗರಣದಲ್ಲಿ ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಅಧಿಕಾರ ದುರುಪಯೋಗ ಪಡಿಸಿರುವುದು ಸಾಬೀತಾಗಿದೆ. ಆದರೆ ವೋಲ್ಕರ್ ಹಗರಣದಲ್ಲಿ ಅವರು ಲಂಚ ಪಡೆದ ಬಗ್ಗೆ ಈತನಕ ಯಾವುದೇ ಸಾಕ್ಷ್ಯಾಧಾರ ದೊರೆತಿಲ್ಲ.

     ಹಗರಣದ ಕುರಿತು ತನಿಖೆ ನಡೆಸಲು ನೇಮಕಗೊಂಡಿದ್ದ ನ್ಯಾಯಮೂರ್ತಿ ಆರ್.ಎಸ್.ಪಾಠಕ್ ಆಯೋಗ ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ವರದಿ ನೀಡಿತು. ಈ ಹಗರಣದಲ್ಲಿ `ಕರಾರು ರಹಿತ' ಫಲಾನುಭವಿಯಾಗಿದ್ದ ಕಾಂಗ್ರೆಸ್‌ಗೆ ಕ್ಲೀನ್ ಚಿಟ್ ನೀಡಲಾಗಿದ್ದು ವರದಿಯ ಇನ್ನೊಂದು ಪ್ರಮುಖ ಅಂಶ.

     ಆಹಾರಕ್ಕಾಗಿ ತೈಲ ಯೋಜನೆ ಹಗರಣದಲ್ಲಿ ನಟವರ್ ಸಿಂಗ್ ಮತ್ತು ಅವರ ಪುತ್ರ- ಶಾಸಕ ಜಗತ್ ಸಿಂಗ್ ಹಣದ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಈ ಹಿಂದೆ ಆರೋಪಿಸಲಾಗಿತ್ತು. ಈ ಆರೋಪದಿಂದ ದೇಶದ ರಾಜಕಾರಣದಲ್ಲಿ ಕೋಲಾಹಲವುಂಟಾಗಿ, ನಟವರ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ವರ್ಷ ನವೆಂಬರ್ ೧೧ ರಂದು ಹಗರಣದ ವಿಚಾರಣೆ ನಡೆಸಲು ನ್ಯಾಯಮೂರ್ತಿ ಆರ್.ಎಸ್.ಪಾಠಕ್ ಅವರನ್ನು ನೇಮಿಸಲಾಗಿತ್ತು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com