ಆಗ್ರಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ
ಆಗ್ರಾ: ಪ್ರವಾಸಿಗಳಾಗಿ ಭಾರತಕ್ಕೆ
ಆಗಮಿಸಿದ್ದ ಮೂವರು ವಿದೇಶಿ ಮಹಿಳೆಯರನ್ನು ಹಿಂಸಿಸಿದ ಘಟನೆ
ಆಗ್ರಾದಲ್ಲಿ ನಡೆದಿದೆ.
ವಿದೇಶೀ ಮಹಿಳೆಯರು ಆಟೊ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ
`ಮೆಹತಾಬ್ ಭಾಗ್' ನ ಹತ್ತಿರ ಅವರಿಗೆ ಕಿರುಕುಳ ಕೊಡಲಾಯಿತು
ಎಂದು ವಿದೇಶೀ ಮಹಿಳೆಯರು ಮಾಧ್ಯಮದವರ ಬಳಿ ದುಃಖ
ಹೇಳಿಕೊಂಡಿದ್ದಾರೆ.
ಟ್ರಾಫಿಕ್ ಗಲಾಟೆಯ ದುರುಪಯೋಗ ಪಡೆದುಕೊಂಡ
ರಿಕ್ಷಾ ಚಾಲಕ ಇವರ ಮಹಿಳೆಯರಿಗೆ ಕಿರುಕುಳ ಕೊಡಲಾರಂಭಿಸಿದ.
ಇದೇ ಸಮಯದಲ್ಲಿ ಗಾಡಿ ಎಳೆಯುವವನೊಬ್ಬ ಕೂಡ ಚಾಲಕನ ಜೊತೆ
ಸೇರಿಕೊಂಡು ಕಿರುಕುಳ ಕೊಡಲಾರಂಭಿಸಿದ.
ಈ ಘಟನೆ ಕಣ್ಣ ಮುಂದೆ ನಡೆಯುತ್ತಿದ್ದರೂ
ಟ್ರಾಫಿಕ್ ಪೋಲಿಸ್ ತನ್ನ ಕೆಲಸದಲ್ಲಿಯೇ ನಿರತನಾಗಿದ್ದು ಗಲಾಟೆ ಶಾಂತವಾದ
ಮೇಲೆ ಆತ ಸ್ಥಳಕ್ಕೆ ಆಗಮಿಸಿರುವುದಾಗಿ ವಿದೇಶಿ ಮಹಿಳೆಯರು
ದೂರಿದ್ದಾರೆ.
ಇತ್ತೀಚೆಗೆ ವಿದೇಶಿ ಮಹಿಳೆಯರ ಮೇಲೆ
ಹಲ್ಲೆಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಸೂಕ್ತ ಕ್ರಮ
ತಗೆದುಕೊಳ್ಳಬೇಕಾಗಿದೆ ಎಂದು ಕಿರುಕುಳ ಎದುರಿಸಿದ ಮಹಿಳೆಯರು
ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು
ಹಾಗಿದ್ದರೆ ನಾವೆಲ್ಲಾ ಪೌರಾಣಿಕ ವಿಷಕನ್ಯೆಯರಾ ?
ಟಿಸಿಎಸ್ `ವಿಶೇಷ ಆರ್ಥಿಕ ವಲಯ'ಕ್ಕೆ
ಸರ್ಕಾರ ಅಸ್ತು